ಕರ್ನಾಟಕ

karnataka

ETV Bharat / jagte-raho

ದಾಬಸ್​ಪೇಟೆ ಪೊಲೀಸರಿಂದ ಮನೆಗಳ್ಳನ ಬಂಧನ: 8.3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ - ನೆಲಮಂಗಲ ಮನೆಗಳ್ಳನ ಬಂಧನ

ದಾಬಸ್ ಪೇಟೆ ಪೊಲೀಸ್​​ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮೂರು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 8 ಲಕ್ಷ 30 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

home-theft-arrested-by-dobbaspet-police
ಮನೆಗಳ್ಳನ ಬಂಧನ

By

Published : Oct 10, 2020, 6:06 PM IST

ನೆಲಮಂಗಲ:ಮೂರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಬಸ್ ಪೇಟೆ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ 8ಲಕ್ಷ 30 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.

ದಾಬಸ್ ಪೇಟೆ ಪೊಲೀಸರಿಂದ ಮನೆಗಳ್ಳನ ಬಂಧನ

ದಾಬಸ್ ಪೇಟೆ ಟೌನ್, ಮರಳಕುಂಟೆ, ನರಸಿಪುರ ಗ್ರಾಮಗಳಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಕೋತಿ ತೋಪಿನ ಮಂಜುನಾಥ್ (34) ಎಂಬ ಆರೋಪಿಯನ್ನ ಬಂಧಿಸಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು ಮನೆಗೆ ನುಗ್ಗುತ್ತಿದ್ದ ಆರೋಪಿ ಚಿನ್ನಾಭರಣ, ಮೊಬೈಲ್, ನಗದು ಹಣ ದೋಚಿ ಪರಾರಿಯಾಗಿದ್ದ. ಬಂಧಿತನಿಂದ 173 ಗ್ರಾಂ ತೂಕದ 8 ಲಕ್ಷ 30 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details