ಕರ್ನಾಟಕ

karnataka

ETV Bharat / jagte-raho

ಹಾಸನದಲ್ಲಿ ಮೂವರು ಬೈಕ್‌ ಕಳ್ಳರ ಬಂಧನ: 1.50 ಲಕ್ಷ ರೂ. ಮೌಲ್ಯದ 5 ಬೈಕ್ ವಶ

ಬೇಕರಿ ಕೆಲಸ ಮಾಡಿಕೊಂಡಿದ್ದ ತಾಲೂಕಿನ ಛತ್ರನಹಳ್ಳಿ ಗ್ರಾಮದ ಮೋಹನಕಮಾರ್ (25), ಮಹೇಶ್ (23) ಹಾಗೂ ಹಂಚಿಹಳ್ಳಿಯ ಮಂಜುನಾಥ್ (27) ಬಂಧಿತ ಆರೋಪಿಗಳು. ಅ. 22 ರಂದು ಹಾಸನ-ಬೇಲೂರು ರಸ್ತೆಯ ಕುಪ್ಪಳಿ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೋಹನಕುಮಾರ್‌ನನ್ನು ತಡೆದು ವಿಚಾರಿಸಿದಾಗ ಕಳ್ಳತನದ ಕೃತ್ಯಗಳು ಬೆಳಕಿಗೆ ಬಂದಿಬವೆ.

Hasan
ಹಾಸನ

By

Published : Oct 25, 2020, 4:48 AM IST

ಹಾಸನ: ನಿರ್ಜನ ಪ್ರದೇಶದಲ್ಲಿ ನಿಂತ ಬೈಕ್‌ಗಳನ್ನು ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡಲು ಯತ್ನಿಸಿದ್ದ ಮೂವರನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು, ಐದು ಬೈಕ್ ಸಹ ವಶಕ್ಕೆ ಪಡೆದಿದ್ದಾರೆ.

ಬೇಕರಿ ಕೆಲಸ ಮಾಡಿಕೊಂಡಿದ್ದ ತಾಲೂಕಿನ ಛತ್ರನಹಳ್ಳಿ ಗ್ರಾಮದ ಮೋಹನಕಮಾರ್ (25), ಮಹೇಶ್ (23) ಹಾಗೂ ಹಂಚಿಹಳ್ಳಿಯ ಮಂಜುನಾಥ್ (27) ಬಂಧಿತ ಆರೋಪಿಗಳು. ಅ. 22 ರಂದು ಹಾಸನ-ಬೇಲೂರು ರಸ್ತೆಯ ಕುಪ್ಪಳಿ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೋಹನಕುಮಾರ್‌ನನ್ನು ತಡೆದು ವಿಚಾರಿಸಿದಾಗ ಕಳ್ಳತನದ ಕೃತ್ಯಗಳು ಬೆಳಕಿಗೆ ಬಂದಿಬವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೈಕ್‌ಗೆ ಸಂಬಂಧಿಸಿದ ಯಾವುದೇ ದಾಖಲೆ ಅವರ ಬಳಿ ಇರಲಿಲ್ಲ. ಅಲ್ಲದೆ ಪ್ರಶ್ನೆಗಳಿಗೆ ಉತ್ತರಿಸಲು ತೊದಲಿಸಿದರಿಂದ ಅನುಮಾನ ಬಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ವಿಚಾರಣೆ ಬಳಿಕ ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ 5 ವಾಹನ ವಶಪಡಿಸಿಕೊಳ್ಳುವಲ್ಲಿ ಹಾಸನ ಗ್ರಾಮಾಂತರ ಪೊಲೀಸರು ಯಶಸ್ವಿ ಆಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಬೈಕ್ ಕಳ್ಳತನ ದಂಧೆಯಲ್ಲಿ ಪಾಲ್ಗೊಂಡಿರುವುದು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದ್ವಿಚಕ್ರ ವಾಹನಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಾಗೂ ಹಾಸನ ತಾಲೂಕಿನ ಗೊರೂರು, ಬೇಲೂರು, ಹೊಳೆನರಸೀಪುರ ಗ್ರಾಮಾಂತರ ಮತ್ತು ಅಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಆರೋಪಿಗಳು ಬೈಕ್​ಗಳ ನಂಬರ್ ಪ್ಲೇಟ್ ಬದಲಾಯಿಸಿ ಬೇರೆ ನಂಬರ್ ಪ್ಲೇಟ್ ಹಾಕಿಕೊಂಡು ಮಾರಾಟ ಮಾಡುತ್ತಿದ್ದರು ಎಂಬುದಾಗಿ ವಿಚಾರಣೆಯ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಹಿನ್ನಲೆ ಮತ್ತು ಇನ್ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಆರೋಪಿಗಳನ್ನು ಪತ್ತೆ ಮಾಡಿದ ಹಾಸನ ಗ್ರಾಮಾಂತರ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಯಾದ ಸಿಪಿಐ ಸುರೇಶ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜು, ಎ.ಎಸ್.ಐ. ರಂಗಪ್ಪ, ಸಿಬ್ಬಂದಿ ಕಾಂತರಾಜಪ್ಪ, ದೇವರಾಜೇಗೌಡ, ಉಮಾಶಂಕರ್​, ದಿವಾಕರ, ಶಿವಣ್ಣ, ಸಂತೋಷ, ಶಿವ, ಹರೀಶ್, ಮಹೇಶ ಎಂ.ಸಿ, ಹಾಗೂ ಹಾಸನ ನಗರ ವೃತ್ತದ ಸಿಬ್ಬಂದಿ ಹೆಚ್.ಸಿ ಹರೀಶ್​ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿದರು.​

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ, ಡಿವೈಎಸ್​​ಪಿ ಪುಟ್ಟಸ್ವಾಮಿಗೌಡ, ಹಾಸನ ಗ್ರಾಮಾಂತರ ವೃತ್ತದ ಸಿಪಿಐ ಸುರೇಶ್ ಉಪಸ್ಥಿತರಿದ್ದರು.

ABOUT THE AUTHOR

...view details