ಹರಿಯಾಣ:ಕಾರೊಂದು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಮೂವರು ಸಜೀವ ದಹನವಾಗಿರುವ ಘಟನೆ ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ ನಡೆದಿದೆ.
ಭೀಕರ ರಸ್ತೆ ಅಪಘಾತ: ಮೂವರ ಸಜೀವ ದಹನ - ಹರಿಯಾಣ ಕ್ರೈಂ ಸುದ್ದಿ
ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹರಿಯಾಣ ಪೊಲೀಸರು, ಪರಾರಿಯಾಗಿರುವ ಟ್ರ್ಯಾಕ್ಟರ್ ಚಾಲಕನನ್ನು ಹುಡುಕುತ್ತಿದ್ದಾರೆ.
![ಭೀಕರ ರಸ್ತೆ ಅಪಘಾತ: ಮೂವರ ಸಜೀವ ದಹನ Haryana](https://etvbharatimages.akamaized.net/etvbharat/prod-images/768-512-9107586-thumbnail-3x2-megha.jpg)
ಮೂವರ ಸಜೀವ ದಹನ
ಸೋನಿಪತ್ನ ಖಾನ್ಪುರ್ ಕಲಾನ್-ಕನನಾ ರಸ್ತೆಯಲ್ಲಿ ನಿನ್ನೆ ಸಂಜೆ ಅವಘಡ ನಡೆದಿದೆ. ಮೃತಪಟ್ಟವರಲ್ಲಿ ಕಾರು ಚಾಲಕನನ್ನು ಬಜಾನಾ ಖುರ್ದ್ ಗ್ರಾಮದ ನಿವಾಸಿ ಸುರೇಂದ್ರ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರ ಬಗ್ಗೆ ಮಾಹಿತಿ ದೊರೆತಿಲ್ಲ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಟ್ರ್ಯಾಕ್ಟರ್ ಚಾಲಕನನ್ನು ಹುಡುಕುತ್ತಿದ್ದಾರೆ.