ಮೈಸೂರು:ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹರಿಕಥೆ ಕಲಾವಿದನ ಮನೆ ಧ್ವಂಸ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ.
ವೈಯಕ್ತಿಕ ದ್ವೇಷ: ನಂಜನಗೂಡಲ್ಲಿ ಹರಿಕಥೆ ಕಲಾವಿದನ ಮನೆ ಧ್ವಂಸ - ಮೈಸೂರು ಕ್ರೈಂ ಸುದ್ದಿ
ಮೋರಿ ವಿಚಾರವಾಗಿ ನಡೆದಿದ್ದ ಜಗಳ ದ್ವೇಷದ ಹೆಮ್ಮರವಾಗಿ ಬೆಳೆದಿದ್ದು, ಮೈಸೂರಿನ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದ ಹರಿಕಥೆ ಕಲಾವಿದರೊಬ್ಬರ ಮನೆಯನ್ನು ಧ್ವಂಸ ಮಾಡಲಾಗಿದೆ.
ವೈಯಕ್ತಿಕ ದ್ವೇಷಕ್ಕೆ ಹರಿಕಥೆ ಕಲಾವಿದನ ಮನೆ ಧ್ವಂಸ
ಹರಿಕಥೆ ಕಲಾವಿದ ಸಚಿನ್ ಎಂಬುವರ ಮನೆಯನ್ನು ಪಕ್ಕದ ಮನೆ ನಿವಾಸಿ ಸುರೇಶ್ ಎಂಬಾತ ಧ್ವಂಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಮೋರಿ ವಿಚಾರವಾಗಿ ನಡೆದಿದ್ದ ಜಗಳ ದ್ವೇಷದ ಹೆಮ್ಮರವಾಗಿ ಬೆಳೆದಿತ್ತಂತೆ. ಸಚಿನ್ ಹಾಗೂ ಕುಟುಂಬಸ್ಥರು ಕೆಲಸ ನಿಮಿತ್ತ ಹೊರಗೆ ಹೋಗಿದ್ದಾಗ ತಡರಾತ್ರಿ ಮನೆಯ ಮೇಲ್ಛಾವಣಿ ಮೇಲೆ ಕಲ್ಲು ಎಸೆದು, ಮನೆಯ ಪೀಠೋಪಕರಣಗಳು, ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸ ಮಾಡಲಾಗಿದೆ.
ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Oct 29, 2020, 11:22 AM IST