ಆಂಧ್ರ ಪ್ರದೇಶ: ಗ್ರಾಮಗಳಲ್ಲಿ ಸೇವೆ ಸಲ್ಲಿಸಲು ಆಂಧ್ರ ಸರ್ಕಾರ ನೇಮಿಸಿದ ನೌಕರರು (ಗ್ರಾಮ ಸ್ವಯಂ ಸೇವಕರು) ಇಬ್ಬರು ಅಪ್ರಾಪ್ತೆಯರನ್ನು ಅಪಹರಿಸಿರುವ ಘಟನೆ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಅಪ್ರಾಪ್ತೆಯರನ್ನು ಅಪಹರಿಸಿದ ಗ್ರಾಮ ಸೇವಕರು ಅರೆಸ್ಟ್... - ಗ್ರಾಮ ಸ್ವಯಂ ಸೇವಕರು
ಇಬ್ಬರು ಬಾಲಕಿಯರನ್ನು ಕಿಡ್ನಾಪ್ ಮಾಡಿದ್ದ ಸರ್ಕಾರಿ ನೌಕರರು ಇದೀಗ ಸಿಕ್ಕಿಬಿದ್ದಿದ್ದಾರೆ.
ಕಿಡ್ನಾಪ್
ಶಿವರಾಮ್, ಚಂದ್ರಶೇಖರ್ ಹಾಗೂ ಮಧುಸೂದನ್ ಎಂಬ ಮೂವರು ಗ್ರಾಮ ಸೇವಕರು 15,17 ವರ್ಷದ ಬಾಲಕಿಯರನ್ನು ಕಿಡ್ನಾಪ್ ಮಾಡಿದ್ದರು. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿಯರು, ಮರಳಿ ಮನೆ ತಲುಪಿ, ಪೋಷಕರ ಬಳಿ ನಡೆದ ಘಟನೆಯನ್ನು ಹೇಳಿಕೊಂಡಿದ್ದಾರೆ.
ಪೋಷಕರ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.