ಕರ್ನಾಟಕ

karnataka

ETV Bharat / jagte-raho

ಪ್ರೇಮವಿವಾಹ: ನವವಿವಾಹಿತನನ್ನು ಥಳಿಸಿದ ಪತ್ನಿಯ ಸಂಬಂಧಿಕರು - ಕೋಯಿಕ್ಕೋಡ್ ಕ್ರೈಂ ಸುದ್ದಿ

ಕುಟುಂಬಸ್ಥರ ತೀವ್ರ ವಿರೋಧದ ನಡುವೆ ಪ್ರೀತಿಸಿದ ಯುವತಿ ಜೊತೆ ಮದುವೆಯಾಗಿದ್ದ ವ್ಯಕ್ತಿ ಮೇಲೆ ಪತ್ನಿಯ ಸಂಬಂಧಿಕರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ.

Goonda attack at Quilandy, Kozhikode in broad daylight
ನವವಿವಾಹಿತನನ್ನು ಥಳಿಸಿದ ಪತ್ನಿಯ ಸಂಬಂಧಿಕರು

By

Published : Dec 5, 2020, 2:12 PM IST

ಕೋಯಿಕ್ಕೋಡ್ (ಕೇರಳ): ಬೆಳ್ಳಂ ಬೆಳಗ್ಗೆಯೇ ನವವಿವಾಹಿತ ಹಾಗೂ ಆತನ ಸ್ನೇಹಿತರ ಮೇಲೆ ಎಂಟು ಜನರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದಿದೆ.

ನವವಿವಾಹಿತನನ್ನು ಥಳಿಸಿದ ಪತ್ನಿಯ ಸಂಬಂಧಿಕರು

ಕುಟುಂಬಸ್ಥರ ತೀವ್ರ ವಿರೋಧದ ನಡುವೆ ಪ್ರೀತಿಸಿದ ಯುವತಿ ಜೊತೆ ಮೊಹಮ್ಮದ್ ಸ್ವಾಲಿಹ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಗುರುವಾರ ತನ್ನ ಗೆಳೆಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಸ್ವಾಲಿಹ್​ನನ್ನು ಕೋಯಿಕ್ಕೋಡ್​ನ ಕೊಯಿಲಾಂಡಿಯಲ್ಲಿ ಅಡ್ಡಗಟ್ಟಿದ ಗುಂಪು ಹಲ್ಲೆ ನಡೆಸಿದೆ.

ಪತ್ನಿಯ ಚಿಕ್ಕಪ್ಪ ಕಳುಹಿಸಿದ ಗ್ಯಾಂಗ್​ ಇದು ಎಂದು ಹೇಳಲಾಗಿದ್ದು, ಸ್ವಾಲಿಹ್​ಗೆ ಜೀವ ಬೆದರಿಕೆ ಹಾಕಿದ್ದಾರೆ. ಸ್ಥಳೀಯರು ಸ್ವಾಲಿಹ್​ ಮೇಲಿನ ಹಲ್ಲೆಯನ್ನು ತಡೆಯಲು ದೌಡಾಯಿಸಿದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಕೊಯಿಲಾಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details