ಗುಂಡ್ಲುಪೇಟೆ:ತಾಲೂಕಿನ ಹಂಗಳ ಗ್ರಾಮದ ಮನೆಯೊಂದರಲ್ಲಿ 60 ಗ್ರಾಂ ಚಿನ್ನವನ್ನು ಕದ್ದ ಕಳ್ಳರಿಬ್ಬರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೆ ಹೆಂಚು ತೆಗೆದು ಚಿನ್ನ ಕಳ್ಳತನ, ಇಬ್ಬರು ಆರೋಪಿಗಳ ಬಂಧನ - ತಾಲೂಕಿನ ಹಂಗಳ ಗ್ರಾಮ
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಮನೆಯೊಂದರಲ್ಲಿಚಿನ್ನ ಕದ್ದ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ: ಮನೆ ಹೆಂಚು ತೆಗೆದು ಚಿನ್ನ ಕಳ್ಳತನ, ಇಬ್ಬರು ಆರೋಪಿಗಳ ಬಂಧನ
ಅದೇ ಗ್ರಾಮದ ಮನು ಅಲಿಯಸ್ ಕುಳ್ಳ, ಕಿರಣ್ ಬೀನ್ ನಾಗರಾಜು ಬಂಧಿತ ಆರೋಪಿಗಳಾಗಿದ್ದು, ಅ. 3ರಂದು ರಾತ್ರಿ ಒಬ್ಬಂಟಿಯಾಗಿದ್ದ ಬಸಮ್ಮ ಎಂಬುವರ ಮನೆಯ ಹೆಂಚು ತೆಗೆದು ಬೀರುವಿನಲ್ಲಿ ಇಟ್ಟಿದ್ದ ಚಿನ್ನವನ್ನು ಕದ್ದು, ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಕಾರು ಮತ್ತು ಚಿನ್ನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ತಿಳಿಸಿದ್ದಾರೆ.