ಪಣಜಿ: ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಿರುವ ಗೋವಾ ಅಪರಾಧ ಶಾಖೆ, ಆರೋಪಿಗಳ ಬಳಿ ಇದ್ದ 8.5 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದೆ.
ಹೊಸ ವರ್ಷದಂದು ಸೇವಿಸಲು ಗೋವಾಗೆ ಡ್ರಗ್ಸ್ ಸಾಗಣೆ ಮಾಡುತ್ತಿರುವ ಕುರಿತು ನಿಖರ ಮಾಹಿತಿ ಪಡೆದ ಅಧಿಕಾರಿಗಳ ತಂಡ, ಗೋವಾ ಅಂತರರಾಷ್ಟ್ರೀಯ ಕೇಂದ್ರದಲ್ಲಿ ತಂಗಿದ್ದ ಮೂರು ಶಂಕಿತ ವ್ಯಕ್ತಿಗಳ ಕೊಠಡಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.
ಆರೋಪಿಗಳು ಕೊಠಡಿ ಹಾಗೂ ತಮ್ಮ ವಾಹನಗಳಲ್ಲಿ ಎಂಡಿಎಂಎ (ಮೀಥೈಲೆನೆಡಿಯೋಕ್ಸಿಮೆಥಾಂಫೆಟಮೈನ್ - ಒಂದು ಬಗೆಯ ಡ್ರಗ್) ಅಡಗಿಸಿಟ್ಟಿದ್ದರು. 8.5 ಲಕ್ಷ ರೂ. ಮೌಲ್ಯದ 85 ಗ್ರಾಂ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ ವೇಳೆ ಡ್ರಗ್ ಮಾರಾಟಕ್ಕೆ ತಯಾರಿ: ಇಬ್ಬರ ಬಂಧನ
ಬಂಧಿತ ಆರೋಪಿಗಳನ್ನು ಹೈದರಾಬಾದ್ ನಿವಾಸಿ ಅಯಾನ್ ಅಲಿ ಖಾನ್, ಮುಂಬೈ ನಿವಾಸಿಗಳಾದ ವ್ಯಾಲೆಂಟೈನ್ ಪೆರೆರಾ ಮತ್ತು ಸ್ಟ್ರೋಮ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ. ತನಿಖೆ ಮುಂದುವರೆದಿದೆ.