ಗಾಜಿಯಾಪುರದ ನಿವಾಸಿ ಬ್ರಿಜೇಂದ್ರ ಮತ್ತು ಆಶಾ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿ ವಿಷಯ ಹಿರಿಯರಿಗೆ ತಿಳಿದಿದ್ದು, ಹಿರಿಯರು ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇನ್ನು ಆಶಾ ಮನೆಯಲ್ಲಿ ಆಕೆಯನ್ನು ಮತ್ತೊಬ್ಬರಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಿದ್ದರು. ಆಶಾ ಸಹ ವಲ್ಲದ ಮನಸ್ಸಿನಿಂದಲೇ ಹಿರಿಯರ ಮಾತಿಗೆ ಒಪ್ಪಿಗೆ ನೀಡಿದ್ದಳು.
ತಾಳಿ ಕಟ್ಟುತ್ತಿರುವಾಗಲೇ ವಧುಗೆ ಗುಂಡಿಕ್ಕಿ ತಾನೂ ಶೂಟ್ ಮಾಡಿಕೊಂಡ ಲವರ್..! ಸಾವಿನಲ್ಲಿ ಪ್ರೀತಿ ಅಂತ್ಯ.!! - ಸಾವಿನಲ್ಲಿ ಪ್ರೀತಿ ಅಂತ್ಯ
ರಾಯ್ಬರೇಲಿ( ಉತ್ತರಪ್ರದೇಶ): ತಾಳಿ ಕಟ್ಟುತ್ತಿರುವ ವೇಳೆಯೇ ಕಲ್ಯಾಣಮಂಟಪಕ್ಕೆ ಬಂದ ಲವರ್ ವಧುವನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.
ಯುವತಿ ಮನೆಯಲ್ಲಿ ವಿವಾಹಕ್ಕೆ ಭರ್ಜರಿ ಸಿದ್ಧತೆ ನಡೆದಿತ್ತು. ಇನ್ನೇನು ಕೆಲವೊತ್ತಿನಲ್ಲಿ ವಿವಾಹ ಸಮಾಪ್ತಿಯಾಗುದರಲ್ಲಿತ್ತು. ಆದ್ರೆ ಬ್ರಿಜೇಂದ್ರ ಗನ್ ತೆಗೆದುಕೊಂಡು ನೇರ ಕಲ್ಯಾಣ ಮಂಟಪಕ್ಕೆ ತೆರಳಿದ್ದಾನೆ. ವರ- ವಧುವಿಗೆ ತಾಳಿ ಕಟ್ಟುತ್ತಿರುವ ಸಂದರ್ಭದಲ್ಲೇ ಆಶಾ ಮೇಲೆ ಬ್ರಿಜೇಂದ್ರ ಗುಂಡು ಹಾರಿಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಆಘಾತಕಾರಿ ವಿಷಯ ಎಂದರೆ, ಇದೆಲ್ಲಾ ಮದುವೆಗೆ ಬಂದ ಅತಿಥಿ, ಸಂಬಂಧಿಕರ ನೋಡ ನೋಡುತ್ತಿದ್ದಂತೆ ನಡೆದುಹೋದ ಘಟನೆ.
ಲವರ್ ಗುಂಡೇಟಿನಿಂದ ಆಶಾ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ತಾನೂ ಶೂಟ್ ಮಾಡಿಕೊಂಡ ಬಿಜೇಂದ್ರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಪ್ರಾಣಬಿಟ್ಟಿದ್ದಾನೆ. ಈ ಮೂಲಕ ತನ್ನ ಪ್ರಿಯತಮೆ ಜೊತೆ ತಾನೂ ಜೀವ ಕಳೆದುಕೊಳ್ಳುವ ಮೂಲಕ ಪ್ರೀತಿಗೆ ಗುಡ್ವೈ ಹೇಳಿದ್ದಾನೆ. ಈ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.