ಚಿಕ್ಕಬಳ್ಳಾಪುರ:ಕೂಲಿ ಕೆಲಸ ಮಾಡುತ್ತಲೇ ಮನೆ ಹಿತ್ತಲಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿರುವ ಘಟನೆ ಚಿಂತಾಮಣಿ ತಾಲೂಕಿನ ಮುದ್ದಲಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಮುದ್ದಲಹಳ್ಳಿ ಗ್ರಾಮದ ನಿವಾಸಿ ಮುನಿಯಪ್ಪ (55) ಕೂಲಿ ಕೆಲಸ ಮಾಡುತ್ತಲೇ ಮನೆಯ ಹಿತ್ತಲನಲ್ಲಿ ಅನಧಿಕೃತವಾಗಿ ಗಾಂಜಾವನ್ನು ಬೆಳಿಸಿದ್ದನು. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.