ಲಖನೌ: ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಇಂದು ನಡೆಸಿದ ಎನ್ಕೌಂಟರ್ನಲ್ಲಿ 2005 ರ ಬಿಜೆಪಿ ನಾಯಕ ಕೃಷ್ಣಾನಂದ ರೈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್ಸ್ಟರ್ ರಾಕೇಶ್ ಪಾಂಡೆಯನ್ನು ಬೇಟೆಯಾಡಲಾಗಿದೆ.
ಅನೇಕ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದ ಮೌ ಜಿಲ್ಲೆಯ ನಿವಾಸಿ ಪಾಂಡೆ ಅಲಿಯಾಸ್ ಹನುಮಾನ್ ಪಾಂಡೆಗಾಗಿ ಯುಪಿ ಪೊಲೀಸರು ಅನೇಕ ವರ್ಷಗಳಿಂದ ಹುಡುಕುತ್ತಿದ್ದರು. ಈತನ ಬಗ್ಗೆ ಸುಳಿವು ಕೊಟ್ಟವವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.