ಕರ್ನಾಟಕ

karnataka

ETV Bharat / jagte-raho

ಬೆಂಗಳೂರಲ್ಲಿ ಯುವತಿ ಮೇಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ... ಆರೋಪಿಗಳು ಅರೆಸ್ಟ್ - Rape case registered in kodigehalli police station

19 ವರ್ಷದ ಯುವತಿ ಮೇಲೆ ಅತ್ಯಾಚಾರ ಪ್ರಕರಣ. ಮದ್ಯದಲ್ಲಿ ಏನನ್ನೋ ಬೆರೆಸಿ ಸ್ನೇಹಿತರೇ ಯುವತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Gang rape of a 19-year-old girl by a friends
19 ವರ್ಷದ ಯುವತಿ ಮೇಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ

By

Published : Jan 19, 2020, 1:33 AM IST

Updated : Jan 19, 2020, 1:45 AM IST

ಬೆಂಗಳೂರು:ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ಲೊಟ್ಟೆಗೊಲ್ಲಹಳ್ಳಿ ಬಡಾವಣೆಯಲ್ಲಿ 19 ವರ್ಷದ ಸ್ನೇಹಿತೆಯೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಖಿಲ್ (19), ಅಭಿನವ್ (19) ಅತ್ಯಾಚಾರ ಎಸಗಿದ ಆರೋಪಿಗಳು. ಜ.15ರಂದು ಕೋರಮಂಗಲ ಬಡಾವಣೆಯ ಇಂಡಿಗೋ ಪಬ್​​ನಲ್ಲಿ ಯುವತಿಯ ಸ್ನೇಹಿತ ನಿಖಿಲ್​ ಹಾಗೂ ಆತನ ಸ್ನೇಹಿತರಾದ ಅಭಿನವ್​​ ಮತ್ತು ಶರತ್​ ಮದ್ಯಪಾನ ಮಾಡಿದ್ದರು.

ಎಫ್​ಐಆರ್​ ಪ್ರತಿ

ಅದೇ ಅಮಲಿನಲ್ಲಿದ್ದ ನಾನು ನನ್ನ ಪಿಜಿಗೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ನಿಖಿಲ್ ಲೊಟ್ಟೆಗೊಲ್ಲಹಳ್ಳಿಯ ದೇವಿನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋದ. ಕೋಣೆಯೊಂದರಲ್ಲಿ ಮಲಗಲು ಹೇಳಿ ಹೋದ. ಸ್ವಲ್ಪ ಸಮಯದ ನಂತರ ನನ್ನ ಪಕ್ಕದಲ್ಲಿ ಮಲಗಿ ಬಲವಂತವಾಗಿ ನಿಖಿಲ್​​ ಅತ್ಯಾಚಾರ ಎಸಗಿದ್ದಾನೆ. ಮತ್ತೆ ಆತನ ಸ್ನೇಹಿತರು ಅತ್ಯಾಚಾರ ಮಾಡಿದ್ದಾರೆ ಎಂದು ಎಫ್​ಐಆರ್​​ನಲ್ಲಿ ಯುವತಿ ದೂರಿದ್ದಾಳೆ.

ಬೆಳಿಗ್ಗೆ 8.40ರ ಸುಮಾರಿಗೆ ಎಚ್ಚರಗೊಂಡಾಗ ಅಭಿನವ್ ನನ್ನ ಪಕ್ಕದಲ್ಲಿದ್ದ. ಮದ್ಯದಲ್ಲಿ ಪ್ರಜ್ಞೆ ತಪ್ಪಿಸುವ ಅಂಶವನ್ನು ಬೆರೆಸಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಯುವತಿ ದೂರಿನಲ್ಲಿ ಒತ್ತಾಯಿಸಿದ್ದಾಳೆ.

Last Updated : Jan 19, 2020, 1:45 AM IST

ABOUT THE AUTHOR

...view details