ಕರ್ನಾಟಕ

karnataka

ETV Bharat / jagte-raho

ತೆಲಂಗಾಣದಲ್ಲಿ ಸರಣಿ ಅಪಘಾತ : ನಾಲ್ವರು ಕೂಲಿ ಕಾರ್ಮಿಕರ ದುರ್ಮರಣ - Vikarabad road accident

ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ..

four workers killed in Telangana road accident
ತೆಲಂಗಾಣ ರಸ್ತೆ ಅಪಘಾತ

By

Published : Dec 26, 2020, 11:43 AM IST

ವಿಕಾರಾಬಾದ್(ತೆಲಂಗಾಣ) :​ಲಾರಿ, ಆರ್​ಟಿಸಿ ಬಸ್​ ಹಾಗೂ ಆಟೋ ಒಂದಕ್ಕೊಂದು ಡಿಕ್ಕಿಯಾಗಿ ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

ರಸ್ತೆ ಅಪಘಾತದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಸಾವು

ವಿಕಾರಾಬಾದ್​ನ ಮೊಮಿನ್‌ಪೇಟೆ ಮಂಡಲ್​​ನ ಚಿತ್ತಂಪಲ್ಲಿ ಗ್ರಾಮದಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸಂಗರೆಡ್ಡಿಯಲ್ಲಿನ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಸ್ಕಿಡ್ ಆಗಿ ಬಿದ್ದ ಮಹಿಳಾ ಕಾನ್​ಸ್ಟೇಬಲ್​ ಬೈಕ್ : ಲಾರಿ ಹರಿದು ಕಾಲು ಕಟ್​

ಘಟನಾ ಸ್ಥಳಕ್ಕೆ ಶಾಸಕ ಮೆಥುಕು ಆನಂದ್ ಭೇಟಿ ನೀಡಿದ್ದು, ಮೃತರ ಸಂಬಂಧಿಕರೊಂದಿಗೆ ಮಾತನಾಡಿದ್ದಾರೆ. ತೆಲಂಗಾಣದಲ್ಲಿ ಕಳೆದ ಕೆಲ ದಿನಗಳಿಂದ ಮಂಜು ಕವಿದ ವಾತಾವರಣವಿದ್ದು, ರಸ್ತೆಯಲ್ಲಿ ವಾಹನಗಳು ಗೋಚರಿಸದೆ ಅಪಘಾತಗಳು ಸಂಭವಿಸುತ್ತಿವೆ.

ABOUT THE AUTHOR

...view details