ಅನೂಪ್ಪುರ್ (ಮಧ್ಯಪ್ರದೇಶ):ಹೆತ್ತ ಅಪ್ಪ-ಅಮ್ಮ ಹಾಗೂ ಒಡಹುಟ್ಟಿದ ತಂಗಿಯನ್ನು ಬೆಂಕಿ ಹಚ್ಚಿ ಸುಟ್ಟು ಬಳಿಕ ತಾನೂ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಂದೆ - ತಾಯಿ, ತಂಗಿಗೆ ಬೆಂಕಿ ಹಚ್ಚಿ ನೇಣಿಗೆ ಶರಣಾದ ಯುವಕ - anoopapur criime news
ಮನೆಯ ಕೋಣೆಯೊಳಗೆ ಅಪ್ಪ - ಅಮ್ಮ ಹಾಗೂ ತಂಗಿ ಕೂಡಿ ಹಾಕಿ ಬೆಂಕಿ ಹಚ್ಚಿ, ನಂತರ ಇನ್ನೊಂದು ಕೋಣೆಯೊಳಗೆ ಯುವಕನೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
![ತಂದೆ - ತಾಯಿ, ತಂಗಿಗೆ ಬೆಂಕಿ ಹಚ್ಚಿ ನೇಣಿಗೆ ಶರಣಾದ ಯುವಕ Four people of the same family died in MP](https://etvbharatimages.akamaized.net/etvbharat/prod-images/768-512-9669971-thumbnail-3x2-megha.jpg)
ತಂದೆ-ತಾಯಿ, ತಂಗಿಗೆ ಬೆಂಕಿ ಹಚ್ಚಿ ನೇಣಿಗೆ ಶರಣಾದ ಯುವಕ
ಮಧ್ಯಪ್ರದೇಶದ ಅನೂಪ್ಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಯುವಕನ ಈ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ತಂದೆ - ತಾಯಿ, ತಂಗಿಯನ್ನು ಮನೆಯ ಕೋಣೆಯೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದ್ದಾನೆ. ನಂತರ ಇನ್ನೊಂದು ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ ಸಾವನ್ನಪ್ಪಿದ್ದಾನೆ.
ಮೃತಪಟ್ಟ ಯುವಕನ ತಂದೆ, ತಾಯಿ, ತಂಗಿಯನ್ನು ಓಂಕಾರ್ (46), ಕಸ್ತೂರಿಯಾ ಬಾಯಿ (40 ), ನಿಧಿ (16) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.