ಕರ್ನಾಟಕ

karnataka

ETV Bharat / jagte-raho

ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ: ಮಗು ಸೇರಿ ನಾಲ್ವರ ದುರ್ಮರಣ - ಮುಂಗೇಲಿ ರಸ್ತೆ ಅಪಘಾತ

ಪಾದಚಾರಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ಕಾರು ಚಾಲಕ ನಿಯಂತ್ರಣ ತಪ್ಪಿ ಟ್ರಕ್​ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಪಾದಚಾರಿ, 6 ವರ್ಷದ ಬಾಲಕಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

Chhattisgarh road accident
ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ

By

Published : Oct 10, 2020, 5:47 PM IST

ಛತ್ತೀಸ್​ಗಢ:ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಬಾಲಕಿ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಛತ್ತೀಸ್​ಗಢದ ಮುಂಗೇಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬಿಲಾಸ್ಪುರದಿಂದ ರಾಯಪುರಕ್ಕೆ ಹೋಗುತ್ತಿದ್ದ ಕಾರಿನಲ್ಲಿ ಐದು ಜನರಿದ್ದರು. ರಸ್ತೆ ಮೇಲೆ ನಡೆದುಹೋಗುತ್ತಿದ್ದ ಪಾದಾಚಾರಿಯೊಬ್ಬರಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ಕಾರು ಚಾಲಕ ನಿಯಂತ್ರಣ ತಪ್ಪಿ ಟ್ರಕ್​ಗೆ ಗುದ್ದಿದ್ದಾನೆ. ಆದರೂ ಕೂಡ ಘಟನೆಯಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಹಾಗೂ ಪಾದಚಾರಿ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಿಮ್ಸ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡ ಸರ್ಗಾಂವ್ ಠಾಣಾ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details