ಚಿತ್ರದುರ್ಗ:ನಾಲ್ಕು ಕೋಟಿ ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿರುವ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆಯ ಪೊಲೀಸರು, ಅದನ್ನು ಬೆಳೆದಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಈ ಮೂಲಕ ಇದು ರಾಜ್ಯದಲ್ಲೇ ದೊಡ್ಡ ಗಾಂಜಾ ಪ್ರಕರಣವಾಗಿದೆ.
ಚಿತ್ರದುರ್ಗ: 4 ಕೋಟಿ ರೂ. ಮೌಲ್ಯದ ಗಾಂಜಾ ವಶ, ನಾಲ್ವರ ಬಂಧನ - ಚಿತ್ರದುರ್ಗ ಜಿಲ್ಲೆ ಸುದ್ದಿ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆಯ ಪೊಲೀಸರು 4 ಕೋಟಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ತಾಲೂಕಿನ ಒಡೆರಹಳ್ಳಿಯಲ್ಲಿಯ 4 ಎಕರೆ 20 ಗುಂಟೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳ ನಡುವೆ ಗಾಂಜಾ ಬೆಳೆಯಲಾಗಿತ್ತು. ಅದು ನಾಲ್ಕು ಕೋಟಿ ಬೆಲೆ ಬಾಳಲಿದೆ ಎಂದರು.
ಗಾಂಜಾ ಬೆಳೆದಿದ್ದ ರುದ್ರೇಶ್ (45), ಮಂಜುನಾಥ್(45), ಜಂಬುನಾಥ್ (50), ಬಿ.ವೈ.ಮಂಜುನಾಥ್ (48) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಹಕಾರ ನೀಡಿದ್ದ ಸುಮಂತ್ ಗೌಡ ತಲೆಮರೆಸಿಕೊಂಡಿದ್ದಾನೆ. ಈಗಾಗಲೇ 150 ಬಂಡಲ್ ಪೈಕಿ ಒಟ್ಟು 9,871 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.