ಮೂಡುಬಿದಿರೆ: ಅಪ್ರಾಪ್ತೆಯೋರ್ವಳನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ ಆರೋಪದಲ್ಲಿ ಮೂಡುಬಿದಿರೆ ತಾಲೂಕಿನ ಮಾರ್ಪಾಡಿಯ ಮೀನು ವ್ಯಾಪಾರಿಯನ್ನು ಬಂಧಿಸಿದ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಮೀನು ವ್ಯಾಪಾರಿ: ಮೂಡುಬಿದಿರೆಯಲ್ಲಿ ಆರೋಪಿ ಬಂಧನ - ಮಾರ್ಪಾಡಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ
ಮೀನು ವ್ಯಾಪಾರಿಯೊಬ್ಬ ಬಾಲಕಿಯ ಮೇಲೆ ಅತ್ಯಾಚಾರಗೈದ ಘಟನೆ ಮೂಡುಬಿದಿರೆ ತಾಲೂಕಿನ ಮಾರ್ಪಾಡಿಯಲ್ಲಿ ನಡೆದಿದೆ. ಪೊಲೀಸರು ಕಾಮುಕನನ್ನು ಬಂಧಿಸಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಸ್ಥಳೀಯ ನಿವಾಸಿ, ಮೀನು ವ್ಯಾಪಾರಿ ಆಸೀಫ್ ಬಂಧಿತ ಆರೋಪಿ. ಮೀನು ವ್ಯಾಪಾರ ಮಾಡುತ್ತಿದ್ದ ಆಸೀಫ್ ಮಾರ್ಪಾಡಿ ಪರಿಸರದಲ್ಲಿ ವಾಸವಿದ್ದ. ತಮಿಳುನಾಡು ಮೂಲದ ಕೂಲಿ ಕಾರ್ಮಿಕರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳನ್ನು ಪರಿಚಯ ಮಾಡಿಕೊಂಡಿದ್ದ. ಈ ಪರಿಚಯದ ಮೇಲೆ ಸಲಿಗೆ ಬೆಳೆಸಿಕೊಂಡ ಆಸೀಫ್ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಮನೆ ಹತ್ತಿರದಲ್ಲೇ ಇರುವ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿ ಮನೆಯಲ್ಲಿ ಮಂಕಾಗಿರೋದನ್ನು ಗಮನಿಸಿದ ಹೆತ್ತವರು, ವಿಚಾರಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.