ಕಾಬೂಲ್ :ಪತ್ರಕರ್ತೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಅಫ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯದ ಜಲಾಲಾಬಾದ್‌ನಲ್ಲಿ ನಡೆದಿದೆ.
ಮಲಲೈ ಮಿವಾಂಡ್, ಹತ್ಯೆಯಾದ ಪತ್ರಕರ್ತೆಯಾಗಿದ್ದಾರೆ. ಖಾಸಗಿ ರೇಡಿಯೋ-ಟಿವಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮಲಲೈ ಮಿವಾಂಡ್ ಅವರನ್ನು ಇಂದು ಬೆಳಗ್ಗೆ ಜಲಾಲಾಬಾದ್ ನಗರದಲ್ಲಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿಕ್ಕಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.