ಹೈದರಾಬಾದ್: ಜನವರಿ 17 ರಂದು ತೆಲಂಗಾಣದ ಹೈದರಾಬಾದ್ನಲ್ಲಿ ಹೆತ್ತ ತಂದೆಯೇ ಮಗನ ಮೇಲೆ ಟರ್ಪೆಂಟ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದನು. ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಲಕಿ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ತಮ್ಮ ಮಗ ಚರಣ್ನೊಂದಿಗೆ ಹೈದರಾಬಾದ್ನ ಕೆಪಿಹೆಚ್‌ಬಿ ಕಾಲೋನಿಯಲ್ಲಿ ಬಾಲು ದಂಪತಿ ವಾಸವಾಗಿದ್ದರು. ಶಾಲೆಗಳಿನ್ನೂ ಆರಂಭವಾಗದ ಕಾರಣ ಚರಣ್ ಮನೆಯಲ್ಲಿಯೇ ಆನ್ಲೈನ್ ಕ್ಲಾಸ್ಗೆ ಹಾಜರಾಗುತ್ತ, ಟ್ಯೂಷನ್ಗೆ ಹೋಗುತ್ತಿದ್ದ. ಆದರೆ ಜ.17ರ ರಾತ್ರಿ ಬಾಲಕನ ತಂದೆ ಬಾಲು, ನೀನು ಟ್ಯೂಷನ್ಗೆ ಪ್ರತಿದಿನ ಹೋಗುತ್ತಿಲ್ಲ, ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲವೆಂದು ಬೈದು, ಚರಣ್ಗೆ ಹೊಡೆದಿದ್ದ. ಇದನ್ನು ತಡೆಯಲು ಬಂದ ಪತ್ನಿಯನ್ನು ದೂಡಿ, ಮಗನ ಮೇಲೆ ಟರ್ಪೆಂಟ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದ.