ಲಲಿತ್ಪುರ (ಉತ್ತರಪ್ರದೇಶ) :ತನ್ನ ಪತ್ನಿ ನಾಲ್ಕನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಲಲಿತ್ಪುರ ಜಿಲ್ಲೆಯ ಧುರ್ವಾರ ಎಂಬ ಗ್ರಾಮದ ನಿವಾಸಿ ವಿನೋದ್ ಅಹಿರ್ವಾರ್ ಮೃತ ವ್ಯಕ್ತಿ. ವೃತ್ತಿಯಲ್ಲಿ ರೈತನಾಗಿದ್ದ ಈತನಿಗೆ ಮೂವರೂ ಹೆಣ್ಣು ಮಕ್ಕಳೇ ಹುಟ್ಟಿದ್ದರು. ಒಂದಾದರೂ ಗಂಡು ಮಗು ಆಗಲಿ ಎಂದು ಕಾದಿದ್ದು, ನಾಲ್ಕನೇ ಬಾರಿ ಕೂಡ ಹೆಣ್ಣು ಮಗು ಜನಿಸಿದೆ. ಇದರಿಂದ ಮನನೊಂದ ವಿನೋದ್ ವಿಷ ಕುಡಿದು ಪ್ರಾಣ ಕಳೆದುಕೊಂಡಿದ್ದಾನೆ.