ಕರ್ನಾಟಕ

karnataka

ETV Bharat / jagte-raho

ಮೈಸೂರು.. ತಂದೆ-ಮಗನ ಕೊಲೆ ಪ್ರಕರಣ, ಮೂವರು ಆರೋಪಿಗಳ ಬಂಧನ - ಮೈಸೂರು ದಕ್ಷಿಣ ಪೊಲೀಸರು ತನಿಖೆ ಆರಂಭ

ಶುಕ್ರವಾರ ಮರಿಕೋಟೆಗೌಡ ಪುತ್ರ ಸತೀಶ್ ಕುಮಾರ್‌ನನ್ನು ಕೊಂದಿದ್ದ ಸ್ಥಳವನ್ನು ಪೊಲೀಸರು ಮಹಜರು ಮಾಡಿದರು. ತಂದೆ ಮಗನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ..

father and son murder accused arrested news
ಮೈಸೂರು: ತಂದೆ-ಮಗನ ಕೊಲೆ ಪ್ರಕರಣ, ಮೂವರು ಆರೋಪಿಗಳ ಬಂಧನ

By

Published : Jan 8, 2021, 10:18 PM IST

ಮೈಸೂರು :ತಂದೆಮಗನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮೈಸೂರು ದಕ್ಷಿಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮೈಸೂರು: ತಂದೆ-ಮಗನ ಕೊಲೆ ಪ್ರಕರಣ, ಮೂವರು ಆರೋಪಿಗಳ ಬಂಧನ

ಓದಿ: ಮಗನ ವಿರುದ್ಧ ದೂರು ನೀಡಲು ಬಂದ ತಂದೆ ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆ

ಮಂಡಕಳ್ಳಿ ಗ್ರಾಮದ ನಿವಾಸಿಗಳಾದ ಮಂಜುನಾಥ್, ಮಹಾದೇವಸ್ವಾಮಿ (ಮಾದಪ್ಪ) ಹಾಗೂ ಸತೀಶ್ ಕುಮಾರ್ ಎಂಬುವರು ಬಂಧಿತ ಆರೋಪಿಗಳು.

ಅಪ್ಪನಿಗಿಂತ ಮೊದಲೇ ಮಗನ ಕೊಂದಿದ್ದರು :ಮಂಡಕಳ್ಳಿ ಗ್ರಾಮದ ಮರಿಕೋಟೆಗೌಡ ಪುತ್ರ ಸತೀಶ್ ಕುಮಾರ್ ಹಾಗೂ ಬಂಧಿತ ಕೊಲೆ ಆರೋಪಿಗಳಿಗೆ 2020 ಡಿಸೆಂಬರ್ 26ರಂದು ರಾತ್ರಿ ಎಪಿಎಂಸಿ ರಸ್ತೆ ಬಳಿ ವೈಯಕ್ತಿಕ‌ ದ್ವೇಷದಿಂದ ಗಲಾಟೆ ನಡೆದಿತ್ತು.

ಆರೋಪಿಗಳಾದ ಮಂಜುನಾಥ್, ಸತೀಶ್ ಕುಮಾರ್, ಮಹದೇವಸ್ವಾಮಿ ಮೂವರು ಸೇರಿ ಮರಿಕೋಟೆಗೌಡ ಪುತ್ರ ಸತೀಶ್ ಕುಮಾರ್ ನನ್ನು ಹತ್ಯೆ ಮಾಡಿ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ಮೈದಾನದಲ್ಲಿ ಮಣ್ಣು ಮಾಡಿದ್ದರು.

ಈ ಘಟನೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಸುಮ್ಮನಿದ್ದರು.‌ ಆದರೆ, ಡಿಸೆಂಬರ್ 26ರಂದೇ ಮಗ ಕಾಣೆಯಾಗಿದ್ದಾನೆ ಎಂದು ಮರಿ ಕೋಟೆಗೌಡ, ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

ಇದರಿಂದ ಹೆದರಿದ ಕೊಲೆಗಾರರು ಮರಿಕೋಟೆಗೌಡನನ್ನ ಜನವರಿ 2ರ ಬೆಳಗ್ಗೆ 7.30ರ ಸಮಯದಲ್ಲಿ ಮಂಡಕಳ್ಳಿ ಗ್ರಾಮ ಹಾಗೂ ಶ್ರೀನಗರ ಗ್ರಾಮದ ರಸ್ತೆಯಲ್ಲಿರುವ ಪುಟ್ಟಯ್ಯ ಜಮೀನಿನಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ತನಿಖೆ ಚುರುಕುಗೊಳಿಸಿದ ದಕ್ಷಿಣ ಠಾಣೆ ಪೊಲೀಸರು, ಮರಿಕೋಟೆಗೌಡನನ್ನು ಕೊಲೆ ಮಾಡಿದ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಆಗ ಮಗನ ಕೊಂದ ವಿಷಯ ತಂದೆಗೆ ಗೊತ್ತಾಗಲಿದೆ ಎಂಬ ಆತಂಕ ಹಾಗೂ ಭಯದಲ್ಲಿ ಮರಿಕೋಟೆಗೌಡನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಶುಕ್ರವಾರ ಮರಿಕೋಟೆಗೌಡ ಪುತ್ರ ಸತೀಶ್ ಕುಮಾರ್‌ನನ್ನು ಕೊಂದಿದ್ದ ಸ್ಥಳವನ್ನು ಪೊಲೀಸರು ಮಹಜರು ಮಾಡಿದರು. ತಂದೆ ಮಗನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ABOUT THE AUTHOR

...view details