ಕರ್ನಾಟಕ

karnataka

ETV Bharat / jagte-raho

ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ರೈತ ಸಾವು

सिंघु बॉर्डर पर प्रदर्शन में शामिल एक किसान की मौत हो गई. बताया जा रहा है कि मृतक किसान 1 दिसंबर से आंदोलन में शामिल था.

sonipat farmer death
ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ರೈತ ಸಾವು

By

Published : Dec 8, 2020, 11:54 AM IST

Updated : Dec 8, 2020, 12:11 PM IST

11:51 December 08

ಡಿಸೆಂಬರ್ 1 ರಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹರಿಯಾಣದ ಸೋನಿಪತ್ ಮೂಲದ ರೈತ ಇಂದು ಸಿಂಘು ಗಡಿಯಲ್ಲಿ ಸಾವನ್ನಪ್ಪಿದ್ದಾರೆ.

ಸೋನಿಪತ್ (ಹರಿಯಾಣ): ದೆಹಲಿ-ಹರಿಯಾಣ ಗಡಿ ಭಾಗವಾದ ಸಿಂಘು ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತ ಇಂದು ಮೃತಪಟ್ಟಿದ್ದಾರೆ.

ಮೃತ ರೈತನನ್ನು ಸೋನಿಪತ್‌ನ ಬರೋಡಾ ಗ್ರಾಮದ ಮುರ್ತಕ್ ಅಜಯ್ (32) ಎಂದು ಗುರುತಿಸಲಾಗಿದೆ. ಇವರು ಡಿಸೆಂಬರ್ 1 ರಿಂದ ಧರಣಿಯಲ್ಲಿ ಪಾಲ್ಗೊಂಡಿದ್ದರು.  

ಓದಿ:ರೈತರ ಹೋರಾಟಕ್ಕೆ ಸಾಥ್‌ ಕೊಟ್ಟ ಸೈನಿಕ ಪೊಲೀಸ್​ ವಶಕ್ಕೆ

ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋನಿಪತ್ ಜನರಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.  

Last Updated : Dec 8, 2020, 12:11 PM IST

ABOUT THE AUTHOR

...view details