ಪಾಟ್ನಾ(ಬಿಹಾರ): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ದೇಶವೇ ಕಂಬನಿ ಮಿಡಿದಿದೆ. ತನ್ನ ನಟನೆಯ ಮೂಲಕವೇ ನೇಮು, ಫೇಮು, ಹಣಗಳಿಸಿದ್ದರೂ ಏಕಾಏಕಿ ಸುಶಾಂತ್ ಸಿಂಗ್ ಸಾವು ಅವರ ಅಪಾರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಆದರೆ ಆದರೆ ಸುಶಾಂತ್ ಸಾವಿನಿಂದ ಮನನೊಂದ ಬಿಹಾರದಲ್ಲಿಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಶಾಂತ್ ಸಾವಿನಿಂದ ಮನನೊಂದು ಬಿಹಾರದಲ್ಲಿ ಇಬ್ಬರು ಅಭಿಮಾನಿಗಳ ಆತ್ಮಹತ್ಯೆ - ಸುಶಾಂತ್ ಸಿಂಗ್ ಅಭಿಮಾನಿಗಳು
ಬಾಲಿವುಡ್‌ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದ ಮನನೊಂದು ಬಿಹಾರದಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡಂಕುವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಯುವತಿ ನೇಣಿಗೆ ಶರಣಾಗಿದ್ದರೆ, ನಳಂದ ಜಿಲ್ಲೆಯ ಲೋಡಿಪುರ ಗ್ರಾಮದಲ್ಲಿ ಯುವಕನೊರ್ವ ಸಾವಿನ ಕದ ತಟ್ಟಿದ್ದಾನೆ.
ಸುಶಾಂತ್ ಸಾವಿನಿಂದ ಮನನೊಂದು ಬಿಹಾರದಲ್ಲಿ ಇಬ್ಬರು ಅಭಿಮಾನಿಗಳ ಆತ್ಮಹತ್ಯೆ
ಪಾಟ್ನಾದ ಕಡಂಕುವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೇಂದ್ರ ನಗರದ ತನ್ನ ಮನೆಯಲ್ಲಿನ ಯುವತಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ 17 ವರ್ಷದ ಮೆಟ್ರಿಕ್ಯುಲೇಷನ್ ವಿದ್ಯಾರ್ಥಿನಿಯಾಗಿದ್ದಳು.
ನಳಂದ ಜಿಲ್ಲೆಯ ಲೋಡಿಪುರ ಗ್ರಾಮದಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ತನ್ನ ನೆಚ್ಚಿನ ನಟದ ಸಾವಿನ ಸುದ್ದಿಯಿಂದ ಮನನೊಂದು ಯುವಕನೊರ್ವ ಸಾವಿಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಚಾಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.