ಬೆಂಗಳೂರು:ಕದ್ದ ಬೈಕ್ಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಫೇಸ್ ಬುಕ್ ಪುಟದಲ್ಲಿ ಬೈಕ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.
ಕದ್ದ ಬೈಕ್ಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಮಾರಾಟ... ಮೂವರ ಬಂಧನ - ಫೇಸ್ ಬುಕ್ ಪುಟದಲ್ಲಿ ಬೈಕ್ ಮಾರಾಟ
ಲಾದಿನ್ ಖಾನ್, ಸೈಯದ್ ಮುಸಾವೀರ್, ಫಹಾದ್ ಬಂಧಿತ ಆರೋಪಿಗಳಾಗಿದ್ದು, ಎಲ್ಲರೂ ಪದವೀಧರರಾಗಿದ್ದಾರೆ. ನಿರುದ್ಯೋಗ ಹಿನ್ನೆಲೆಯಲ್ಲಿ ಹಣ ಸಂಪಾದನೆಗಾಗಿ ಅಡ್ಡದಾರಿ ತುಳಿದಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳು ಬಳಿಕ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹೈ ಎಂಡ್ ಬೈಕ್ ಸೇಲ್ ಮಾಡೋದಾಗಿ ಪೋಸ್ಟ್ ಮಾಡುತ್ತಿದ್ದರು.

ಕದ್ದ ಬೈಕ್ಗಳಿಗೆ ನಕಲಿ ನಂಬರ್ ಪ್ಲೇಟ್ ಹಾಕಿ ಪೋಸ್ಟ್ ಮಾಡುತ್ತಿದ್ದರು. ನಕಲಿ ನಂಬರ್ ಅಳವಡಿಸಿಕೊಂಡ ಬೈಕ್ಗಳಲ್ಲೇ ಸುತ್ತಾಡುತ್ತಿದ್ದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಬೈಕ್ ಕಳ್ಳತನ ಮಾಡುತ್ತಿರುವುದು ಬಯಲಿಗೆ ಬಂದಿದೆ. 8 ಪ್ರಕರಣಗಳು ಪತ್ತೆಯಾಗಿದ್ದು, 10 ಬೈಕ್ ಗಳನ್ನು ವಶಪಡಿಸಿಕೊಂಡು ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.