ಕುಷ್ಟಗಿ (ಕೊಪ್ಪಳ): ಕುಷ್ಟಗಿಯಲ್ಲಿ ಖೋಟಾನೋಟು ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಆತಂಕಗೊಂಡಿದ್ದಾರೆ.
ಕುಷ್ಟಗಿಯಲ್ಲಿ ಖೋಟಾನೋಟು ಪತ್ತೆ - Fake currency latest news
ಕುಷ್ಟಗಿಯ ವ್ಯಕ್ತಿಯೊಬ್ಬರು ಕಳೆದ ವಾರ 500 ರೂ. ಮುಖಬೆಲೆಯ ನೋಟುಗಳನ್ನು ಸ್ಥಳೀಯವಾಗಿ ವ್ಯವಹರಿಸುವಾಗ ಅವರಿಗೆ ನಕಲಿ ನೋಟೊಂದು ಸಿಕ್ಕಿದ್ದು, ಪೊಲೀಸರು ನಕಲಿ ನೋಟಿನ ಹಾವಳಿಯನ್ನು ನಿಯಂತ್ರಿಸಬೇಕಿದೆ.
ಕುಷ್ಟಗಿಯ ವ್ಯಕ್ತಿಯೊಬ್ಬರು ಕಳೆದ ವಾರ 500 ರೂ. ಮುಖಬೆಲೆಯ ನೋಟುಗಳನ್ನು ಸ್ಥಳೀಯವಾಗಿ ವ್ಯವಹರಿಸುವಾಗ ಅವರಿಗೆ ಈ ನಕಲಿ ನೋಟು ಕಂಡುಬಂದಿದೆ. 500 ರೂ. ಮುಖಬೆಲೆಯ ನೋಟು ಇದಾಗಿದ್ದು, ಇದರಲ್ಲಿ 8CS 051544 ಎಂಬ ಸಂಖ್ಯೆಗಳಿವೆ. ಸದರಿ ವ್ಯಕ್ತಿ ಹೊಸಪೇಟೆ ಔಷಧಿ ಅಂಗಡಿಯಲ್ಲಿ ನೀಡಿದಾಗ ಔಷಧಿ ಅಂಗಡಿಯಾತ ನಕಲಿ ಎಂದು ಪತ್ತೆ ಹಚ್ಚಿದ್ದು, ಈ ನೋಟು ಇಟ್ಟುಕೊಳ್ಳಬೇಡಿ ಹರಿದು ಹಾಕಿ ಎಂದು ಸಲಹೆ ನೀಡಿದ್ದಾನೆ.
ಈ ನಕಲಿ ನೋಟು 500 ರೂ. ನೋಟಿನ ತದ್ರೂಪವಾಗಿದ್ದು, ಜನ ಇಂತಹ ನೋಟುಗಳಿಂದ ಯಾಮಾರಿ ಕೈ ಸುಟ್ಟುಕೊಳ್ಳುವ ಬದಲಿಗೆ ಎಚ್ಚರಿಕೆಯಿಂದ ಇರಬೇಕಾಗಿದೆ. ಜೊತೆಗೆ ಪೊಲೀಸರು ನಕಲಿ ನೋಟಿನ ಹಾವಳಿಯನ್ನು ನಿಯಂತ್ರಿಸಬೇಕು ಎನ್ನುವ ಮಾತು ಕೇಳಿಬರುತ್ತಿದೆ.