ನವದೆಹಲಿ: 1999ರ ಜಾರ್ಖಂಡ್ನ ಕಲ್ಲಿದ್ದಲು ಹಗರಣ ಸಂಬಂಧ ಕೆಲ ಹೊತ್ತಿನ ಮುಂಚಷ್ಟೇ ಕೇಂದ್ರ ಮಾಜಿ ಸಚಿವ ದಿಲೀಪ್ ರಾಯ್ಗೆ ಮೂರು ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದು, ಇದೀಗ ರಾಯ್ಗೆ ಜಾಮೀನು ಮಂಜೂರಾಗಿದೆ. ಸಿಬಿಐ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ನವೆಂಬರ್ 25ರ ಗಡುವು ನೀಡಿದೆ.
ಕಲ್ಲಿದ್ದಲು ಹಗರಣ: ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಜಾಮೀನು ಪಡೆದ ದಿಲೀಪ್ ರಾಯ್ - Three-year jail for ex Union Minister convicted in coal scam
ಜಾರ್ಖಂಡ್ನ ಕಲ್ಲಿದ್ದಲು ಹಗರಣದ ಅಪರಾಧಿಗಳಿಗೆ ಇಂದು ಸಿಬಿಐ ಸ್ಪೆಷಲ್ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಆದರೆ ತೀರ್ಪು ಪ್ರಕಟವಾದ ಒಂದು ಗಂಟೆಯಲ್ಲೇ ಕೇಂದ್ರ ಮಾಜಿ ಸಚಿವ ದಿಲೀಪ್ ರಾಯ್ಗೆ ಜಾಮೀನು ಮಂಜೂರಾಗಿದೆ.
ಜಾರ್ಖಂಡ್ನ ಕಲ್ಲಿದ್ದಲು ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ರಾಜ್ಯ ಸಚಿವರಾಗಿದ್ದ ದಿಲೀಪ್ ರಾಯ್, ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ (ಸಿಟಿಎಲ್)ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್ರನ್ನು ಅಪರಾಧಿಗಳೆಂದು ಅಕ್ಟೋಬರ್ 6 ರಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭಾರತ್ ಪರಾಶರ್ ತೀರ್ಪು ನೀಡಿದ್ದರು.
ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣದ ಕುರಿತು ಇಂದು ವಿಚಾರಣೆ ನಡೆಸಿದ್ದ ಸಿಬಿಐ ಸ್ಪೆಷಲ್ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಆದರೆ ತೀರ್ಪು ಪ್ರಕಟವಾದ ಒಂದು ಗಂಟೆಯಲ್ಲೇ ದಿಲೀಪ್ ರಾಯ್ ಒಂದು ಲಕ್ಷ ಶ್ಯೂರಿಟಿ ಮೇಲೆ ಜಾಮೀನು ಪಡೆದಿದ್ದಾರೆ. ಇವರೊಂದಿಗೆ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್ಗೆ ಕೂಡ ಜಾಮೀನು ಮಂಜೂರಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.