ಮೈಸೂರು: ಪತ್ನಿ ಹಾಗೂ ಅಕ್ಕನ ಮಗಳನ್ನು ಹತ್ಯೆಗೈದು ಪರಾರಿಯಾಗಿದ್ದ ವ್ಯಕ್ತಿಗೆ 8 ವರ್ಷದ ನಂತರ ಮೈಸೂರು ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ವಿಧಿಸಿದೆ.
ಪತ್ನಿ ಜೊತೆ ಸಂಬಂಧಿಯ ಹತ್ಯೆ: ಆರೋಪಿಗೆ ಮೈಸೂರು ಜಿಲ್ಲಾ ನ್ಯಾಯಾಲಯದಿಂದ ಮರಣದಂಡನೆ - ಕೊನೆಗೂ ಸೆರೆಸಿಕ್ಕ ಜೋಡಿ ಕೊಲೆ ಹಂತಕ
ಪತ್ನಿ ಹಾಗೂ ಅಕ್ಕನ ಮಗಳನ್ನು ಹತ್ಯೆಗೈದು ಪರಾರಿಯಾಗಿದ್ದ ವ್ಯಕ್ತಿಗೆ 8 ವರ್ಷದ ನಂತರ ಮೈಸೂರು ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.
![ಪತ್ನಿ ಜೊತೆ ಸಂಬಂಧಿಯ ಹತ್ಯೆ: ಆರೋಪಿಗೆ ಮೈಸೂರು ಜಿಲ್ಲಾ ನ್ಯಾಯಾಲಯದಿಂದ ಮರಣದಂಡನೆ](https://etvbharatimages.akamaized.net/etvbharat/prod-images/768-512-5058010-thumbnail-3x2-hrs.jpg)
ಮರಣ ದಂಡನೆ ಶಿಕ್ಷೆಗೆ ಗುರಿಯಾದ ಇಷಾದ್ ಪಾಷ ಉತ್ತರ ಪ್ರದೇಶ ಮೂಲದವನಾಗಿದ್ದು, ಕೆಲಸ ಅರಸಿ ಮೈಸೂರಿಗೆ ಬಂದ ಸಂದರ್ಭದಲ್ಲಿ ಇಲ್ಲಿಯ ಸಿದ್ದಿಕಿ ಬಾನು ಎಂಬ ಮಹಿಳೆಯನ್ನು ವಿವಾಹವಾಗಿದ್ದ. ಮದ್ಯ ಸೇವನೆಯ ಚಟಕ್ಕೆ ದಾಸನಾಗಿದ್ದ ಈತ 2008ರ ಮೇ 7 ರಂದು ಪತ್ನಿಯೊಂದಿಗೆ ಗಲಾಟೆ ಮಾಡಿ ಮಾರಕಾಸ್ತ್ರಗಳಿಂದ ಕತ್ತಿಗೆ ತಿವಿದು ಬರ್ಬರವಾಗಿ ಕೊಲೆ ಮಾಡಿದ್ದ. ಈ ಸಂದರ್ಭ ಮನೆಯಲ್ಲೇ ಇದ್ದ ಪತ್ನಿಯ ಅಕ್ಕನ ಮಗಳು ಸುರಾನ ಬಾನು ತಡೆಯಲು ಬಂದಾಗ ಆಕೆಗೂ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಿದ್ದ.
8 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು 2017 ರ ಫೆಬ್ರವರಿ 21 ರಂದು ಉದಯಗಿರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೊಂದು 'ಅಪರೂಪದ ಪ್ರಕರಣ'ವೆಂದು ಪರಿಗಣಿಸಿದ ನ್ಯಾಯಧೀಶರಾದ ಹೊಸಮನಿ ಪುಂಡಲೀಕ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.