ಕರ್ನಾಟಕ

karnataka

ETV Bharat / jagte-raho

ದೆಹಲಿ ಶೂಟೌಟ್​: ನಾಲ್ವರು ಕ್ರಿಮಿನಲ್​ಗಳನ್ನು ಬಂಧಿಸಿದ ಪೊಲೀಸರು - ಗಾಯಗೊಂಡ ಕ್ರಿಮಿನಲ್ಸ್

ಸೌತ್ ವೆಸ್ಟ್ ರೇಂಜ್ ವಿಶೇಷ ಸೆಲ್ ಸಿಬ್ಬಂದಿ ತಂಡದೊಂದಿಗೆ ನಡೆದ ಘರ್ಷಣೆಯಲ್ಲಿ ನಾಲ್ವರು ಕ್ರಿಮಿನಲ್ಸ್ ಗಾಯಗೊಂಡಿದ್ದಾರೆ. ಅವರು ಲಾರೆನ್ಸ್ ಬಿಶ್ನಾಯ್ ಕಲಾ ಜಥೆಡಿ ಗಾಂವ್ ಗ್ಯಾಂಗ್‌ಗೆ ಸೇರಿದವರಾದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

shootout
shootout

By

Published : Oct 8, 2020, 1:53 PM IST

ನವದೆಹಲಿ:ಬೇಗಂಪುರ ಪೊಲೀಸ್ ಠಾಣಾ ಪ್ರದೇಶದ ದೀಪ್ ವಿಹಾರ್‌ನ ಹನುಮಾನ್ ಚೌಕ್ ಬಳಿ ಸೌತ್ ವೆಸ್ಟ್ ರೇಂಜ್ (ಎಸ್‌ಡಬ್ಲ್ಯುಆರ್) ವಿಶೇಷ ಸೆಲ್ ಸಿಬ್ಬಂದಿ ತಂಡದೊಂದಿಗೆ ನಡೆದ ಘರ್ಷಣೆಯಲ್ಲಿ ನಾಲ್ವರು ಕ್ರಿಮಿನಲ್ಸ್ ಗಾಯಗೊಂಡಿದ್ದಾರೆ.

ಅಪರಾಧಿಗಳು ಲಾರೆನ್ಸ್ ಬಿಶ್ನಾಯ್ ಕಲಾ ಜಥೆಡಿ ಗಾಂವ್ ಗ್ಯಾಂಗ್‌ಗೆ ಸೇರಿದವರಾಗಿದ್ದಾರೆ ಎಂದು ಎಸ್‌ಡಬ್ಲ್ಯುಆರ್​ನ ವಿಶೇಷ ತಂಡ ತಿಳಿಸಿದೆ.

ರೋಹಿತ್, ಅಮಿತ್, ರವೀಂದರ್ ಯಾದವ್ ಮತ್ತು ಸುನಿಲ್ ಎಂಬ ನಾಲ್ವರು ಅಪರಾಧಿಗಳಿಗೆ ಅನೇಕ ಗುಂಡಿನ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು, ನಾಲ್ಕು ಸ್ವಯಂಚಾಲಿತ ಪಿಸ್ತೂಲ್, 70 ಲೈವ್ ಕಾರ್ಟಿಡ್ಜ್​ಗಳು, ಎರಡು ದೇಶಿ ನಿರ್ಮಿತ ಪಿಸ್ತೂಲ್, ಮೂರು ಗುಂಡು ನಿರೋಧಕ ಜಾಕೆಟ್ ಮತ್ತು ಹೆಲ್ಮೆಟ್​ಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಮತ್ತು ಗುಂಡಿನ ದಾಳಿ ಪ್ರಕರಣಗಳಲ್ಲಿ ಇವರು ತೊಡಗಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ABOUT THE AUTHOR

...view details