ಕರ್ನಾಟಕ

karnataka

ETV Bharat / jagte-raho

ಲಾಕ್​ಡೌನ್​ ಮಧ್ಯೆ ಮಕ್ಕಳ ಭವಿಷ್ಯದ ಕುರಿತು ಜಗಳ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ! - ದೆಹಲಿ ಕ್ರೈಂ ಸುದ್ದಿ

ಮಕ್ಕಳ ಭವಿಷ್ಯದ ಕುರಿತು ಚರ್ಚೆ, ವಾದ-ವಿವಾದಗಳು ಪ್ರಾರಂಭವಾಗಿದ್ದು, ತಾಳ್ಮೆ ಕಳೆದುಕೊಂಡ ಪತಿ ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಪ್ರಕರಣ ನಡೆದಿದೆ.

Delhi man kills wife over argument about children's future
ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

By

Published : Apr 25, 2020, 4:49 PM IST

ನವದೆಹಲಿ:ಮಕ್ಕಳ ಭವಿಷ್ಯದ ಬಗ್ಗೆ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ದೆಹಲಿಯ ಮದಿಪುರದ ಜೆ.ಜೆ. ಕಾಲೋನಿಯಲ್ಲಿ ನಡೆದಿದೆ.

ಬೀದಿ ಬದಿ ವ್ಯಾಪಾರಿಯಾಗಿರುವ ರೈಸುಲ್ ಅಜಮ್ (34), ತನಗಿಂತ ಐದು ವರ್ಷ ಹಿರಿಯಳಾದ ಗುಲ್ಶನ್ (39) ಎಂಬಾಕೆಯನ್ನು ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಇವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಅಜಮ್​ಗೆ ಮೊದಲನೇ ಪತ್ನಿಯ ಮೂರು ಮಕ್ಕಳು ಹಾಗೂ ಗುಲ್ಶನ್​ಗೆ ಮೊದಲನೇ ಪತಿಯ ಆರು ಮಕ್ಕಳಿದ್ದಾರೆ. ಇದೀಗ ದಂಪತಿಗೆ ಒಟ್ಟು 9 ಮಕ್ಕಳಿದ್ದು, ಇವರ ಭವಿಷ್ಯದ ಕುರಿತು ಚರ್ಚೆ, ವಾದ-ವಿವಾದಗಳು ಪ್ರಾರಂಭವಾಗಿದ್ದವು. ಇದರಿಂದ ತಾಳ್ಮೆ ಕಳೆದುಕೊಂಡಿರುವ ಅಜಮ್​​, ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ.

ಜಗಳ ತಾರಕಕ್ಕೇರುತ್ತಿದ್ದಂತೆಯೇ ಅಜಮ್​, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ ಪೊಲೀಸರು ಮನೆಗೆ ಬರುವಷ್ಟರಲ್ಲಿ ಕೊಲೆಗೈದಿದ್ದು, ತಾನೇ ಶರಣಾಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಇನ್ನು ಘಟನೆ ನಡೆದಿರುವ ಮದಿಪುರದ ಜೆ.ಜೆ. ಕಾಲೋನಿಯಲ್ಲಿ ಕೋವಿಡ್​-19 ಪ್ರಕರಣಗಳ ಸಂಖ್ಯೆ ಅಧಿಕವಿದ್ದು, ಕಂಟೈನ್ಮೆಂಟ್​ ವಲಯವೆಂದು ಘೋಷಿಸಲಾಗಿದೆ.

ABOUT THE AUTHOR

...view details