ಕಾಲುವೆಯಲ್ಲಿ ಈಜಲು ಹೋಗಿದ್ದ ಬಾಲಕ ಸಾವು - ದೊಡ್ಡ ಕಾಲುವೆಯಲ್ಲಿ ಈಜಾಡಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ
ನಗರದ ಹೊರವಲಯದ ತುಂಗಭದ್ರ ಕಾಲುವೆಯಲ್ಲಿ ಗೆಳೆಯರೊಂದಿಗೆ ಸೋಮವಾರ ಈಜಾಡಲು ಹೋಗಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.

ಸ್ನೇಹಿತರೊಂದಿಗೆ ಕಾಲುವೆಯಲ್ಲಿ ಈಜಲು ಹೋಗಿದ್ದ ಬಾಲಕ ಸಾವು
ಬಳ್ಳಾರಿ:ನಗರದ ಹೊರವಲಯದ ತುಂಗಭದ್ರ ಕಾಲುವೆಯಲ್ಲಿ ಗೆಳೆಯರೊಂದಿಗೆ ಸೋಮವಾರ ಈಜಾಡಲು ಹೋಗಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ನಗರದ ಕೌಲ್ ಬಜಾರ್ ನಿವಾಸಿಯಾಗಿರುವ ಯುಮಾಯೂನ್ (16) ಎಂಬಾತನ ಶವ ಎತ್ತಿನಬೂದಿಹಾಳ್ ಸಮೀಪ ಮಂಗಳವಾರ ಸಂಜೆ ಪತ್ತೆಯಾಗಿದೆ. ಆರಂಭದಲ್ಲಿ ಬಾಲಕ ಸಣ್ಣ ಕಾಲುವೆಯಲ್ಲಿ ಈಜುವುದನ್ನು ಕಲಿಯುತ್ತಿದ್ದನಂತೆ. ನಂತರದ ದಿನಗಳಲ್ಲಿ ದೊಡ್ಡ ಕಾಲುವೆಯಲ್ಲಿ ಈಜಾಡಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.