ಕರ್ನಾಟಕ

karnataka

ETV Bharat / jagte-raho

ಕುಡಿತಕ್ಕೆ ದಾಸನಾದ ಕೆಇಬಿ ನೌಕರನಿಗೆ ಗುಂಡಿಕ್ಕಿ ಹತ್ಯೆ - ಹಾಸನ ಗುಂಡಿಕ್ಕಿ ವ್ಯಕ್ತಿಯ ಹತ್ಯೆ

ಕುಡಿದ ಮತ್ತಿನಲ್ಲಿ ಇದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಹಾಸನದ ಅರೇಕಲ್ಲು ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

dead-body-found-in-hassan
ಶ್ರೀನಿವಾಸಗೌಡ

By

Published : Jan 16, 2021, 7:54 PM IST

ಹಾಸನ: ಕುಡಿದ ಮತ್ತಿನಲ್ಲಿ ಇದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಹಾಸನದಲ್ಲಿ ನಡೆದಿದೆ.

ಕುಡಿದು ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ದೇಹದಲ್ಲಿ ಬುಲೆಟ್​ ಪತ್ತೆ

ಅರೇಕಲ್ಲು ಹೊಸಳ್ಳಿ ಗ್ರಾಮದ ಸಂತೋಷ್ (36) ಕೊಲೆಯಾದ ವ್ಯಕ್ತಿ. ಗ್ರಾಮದ ಬಳಿಯ ಹೊಲದಲ್ಲಿ ಶವ ಪತ್ತೆಯಾಗಿದೆ. ರಾತ್ರಿ ಕಂಠಪೂರ್ತಿ ಕುಡಿದು ಬೆಳಗ್ಗೆ ಆಗುವಷ್ಟರಲ್ಲಿ ಮೃತಪಟ್ಟ ಸಂತೋಷ್​ನನ್ನು ನೋಡಿದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಈತನನ್ನು ಗುಂಡಿಕ್ಕಿ ಕೊಲೆಗೈದಿರುವುದು ತಿಳಿದುಬಂದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಮೃತನು ನಗರದ ವಿದ್ಯುತ್ ಇಲಾಖೆಯಲ್ಲಿ ಕಿರಿಯ ತಾಂತ್ರಿಕ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅನುಕಂಪದ ಆಧಾರದ ಮೇಲೆ ಇಲಾಖೆ ಅವನಿಗೆ ಕೆಲಸ ನೀಡಲಾಗಿತ್ತು. ಆದರೆ ಕೆಲಸಕ್ಕೆ ಮಾತ್ರ ಸರಿಯಾಗಿ ಹೋಗುತ್ತಿರಲಿಲ್ಲ. ಕುಡಿತಕ್ಕೆ ದಾಸನಾಗಿದ್ದ ಈತನಿಗೆ ಸಾಕಷ್ಟು ಬಾರಿ ಪೋಷಕರು ಮತ್ತು ಹೆಂಡತಿ ಮನೆಯವರು ಬುದ್ಧಿವಾದ ಹೇಳಿದ್ದರು.

ಓದಿ-ಕೌನ್ ಬನೇಗಾ ಕರೋಡ್​ಪತಿಯಲ್ಲಿ ಮಿಂಚಿದ ರವಿ: ಗೆದ್ದ ಹಣ ಬಡ ಮಕ್ಕಳ ಆರೋಗ್ಯ ಚಿಕಿತ್ಸೆಗೆ ಮೀಸಲಿಟ್ಟ ಹೃದಯವಂತಆ

ಬುದ್ಧಿವಾದದ ಮಾತಿಗೂ ಬೆಲೆ ಕೊಡದ ಸಂತೋಷ್​​, ತನ್ನ ಹಳೆಯ ಚಾಳಿ ಬಿಟ್ಟಿರಲಿಲ್ಲ. ಸ್ನೇಹಿತರೊಂದಿಗೆ ನಿತ್ಯ ಒಂದಿಲ್ಲ ಒಂದು ಕಡೆ ಪಾರ್ಟಿ ಮಾಡುತ್ತಿದ್ದ. ಇದೊಂದೇ ಕಾರಣಕ್ಕೆ ಕೊಲೆಯಾಗಿರಬಹುದು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಂಬಂಧಿಕರು ಕೊಲೆ ಮಾಡಿಸಿದ್ದಾರಾ ಅಥವಾ ನಿನ್ನೆ ಮೋಜು ಮಸ್ತಿ ಮಾಡಲು ಹೋಗಿದ್ದ ಯಾರು ಈ ಕೃತ ಎಸಗಿದ್ದಾರಾ ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪೊಲೀಸರಿಗೆ ಕೆಲ ಸಂಬಂಧಿಕರ ಮೇಲೆ ಅನುಮಾನ ವ್ಯಕ್ತವಾಗಿದೆ. ಅಂತ್ಯಕ್ರಿಯೆ ಮುಗಿದ ಬಳಿಕ ಕೆಲವರನ್ನ ವಿಚಾರಣೆಗೆ ಒಳಪಡಿಸಿ ಎರಡು-ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಪೊಲೀಸರು ಮೃತ ಸಂತೋಷ್​ನ ದೂರವಾಣಿ ಕರೆಗಳ ಶೋಧ ನಡೆಸುತ್ತಿದ್ಧಾರೆ.

ಬೆಳಗ್ಗೆ ಸ್ಥಳಕ್ಕೆ ಹೋದಾಗ ಅನಾಮಿಕ ಶವದಂತೆ ಕಂಡ ಬಂತು. ಬಳಿಕ ಶೂಟ್​ ಮಾಡಿ ಕೊಲೆ ಮಾಡಿರುವುದು ತಿಳಿದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ವರದಿ ಬಂದ ನಂತರ ಘಟನೆ ಹಿನ್ನೆಲೆ ತಿಳಿಯಲಿದೆ. ಎರಡು-ಮೂರು ದಿನಗಳಲ್ಲಿ ಆರೋಪಿಗಳನ್ನ ಬಂಧಿಸುತ್ತೇವೆ ಎಂದು ಎಸ್ಪಿ ಆರ್​​. ಶ್ರೀನಿವಾಸಗೌಡ ಹೇಳಿದರು.

ABOUT THE AUTHOR

...view details