ದಾವಣಗೆರೆ: ಮೊಬೈಲ್ ಅಂಗಡಿ ಬಾಗಿಲು ಮುರಿದು ಸೆಕೆಂಡ್ ಹ್ಯಾಂಡ್ ಮೊಬೈಲ್ಗಳನ್ನು ಕದ್ದೊಯ್ದಿರುವ ಘಟನೆ ನಗರದ ಕೆ ಬಿ ಬಡಾವಣೆಯಲ್ಲಿ ನಡೆದಿದೆ.
ಚಾಲಾಕಿ ಕಳ್ಳರು ಸುಮಾರು 2 ಲಕ್ಷ ರೂ. ಮೌಲ್ಯದ ಸೆಕೆಂಡ್ ಹ್ಯಾಂಡ್ ಮೊಬೈಲ್ಗಳನ್ನು ಎಗರಿಸಿದ್ದಾರೆ. ಕೆ ಬಿ ಬಡಾವಣೆಯಲ್ಲಿರುವ ಶಶಿ ಎಂಬುವರ ಮಾಲೀಕತ್ವದ ಎಫ್ಡಿ ಕಮ್ಯೂನಿಕೇಷನ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಕದ್ದ ಮೊಬೈಲ್ಗಳನ್ನು ಬ್ಯಾಗ್ವೊಂದರಲ್ಲಿ ಹಾಕಿಕೊಂಡು ಖದೀಮರು ತೆರಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.