ಬೆಂಗಳೂರು: ನಿರ್ಭಯಾ ಯೋಜನೆಯಡಿ ಮಹಿಳೆಯರ ಸುರಕ್ಷತೆಗೆಂದು ಅನುಮೋದನೆಗೊಂಡ ಟೆಂಡರ್ನಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪವನ್ನು ಐಪಿಎಸ್ ಅಧಿಕಾರಿ ಡಿ.ರೂಪಾ ಮಾಡಿದ್ದರು. ಹೀಗಾಗಿ ನಿನ್ನೆ ಇಬ್ಬರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಗೃಹ ಇಲಾಖೆಯ ಮೊದಲ ಮಹಿಳಾಕಾರ್ಯದರ್ಶಿಯಾಗಿ ಡಿ ರೂಪಾ ಆಯ್ಕೆಯಾಗಿದ್ದರು. ಆದರೆ, ಟೆಂಡರ್ ಅಕ್ರಮ ಆರೋಪ ಹಿನ್ನೆಲೆ ವರ್ಗಾವಣೆಯಾಗಿದ್ದು, ಇದೀಗ ವರ್ಗಾವಣೆ ಬೆನ್ನಲ್ಲೇ ಡಿ ರೂಪಾ, ನಿಂಬಾಳ್ಕರ್ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ರೂಪಾ ಪರವಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಇಂದಿನಿಂದ ನಾನು ಹೊಸ ಹುದ್ದೆ ನಿಭಾಯಿಸಲಿದ್ದೇನೆ. ವರ್ಗಾವಣೆ ಆಗಿರುವುದು ನನಗೆ ಬೇಸರವಿಲ್ಲ, ಮುಂದೆಯೂ ನಾನು ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುತ್ತೇನೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ನನ್ನ ವರ್ಗಾವಣೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾದ್ರೆ ಖುಷಿಯ ವಿಚಾರ ಎಂದು ಟ್ವೀಟ್ ಮಾಡಿದ್ದಾರೆ.