ಉತ್ತರ ಕನ್ನಡ: ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಗೋಡದಲ್ಲಿ 2018 ರ ಫೆಬ್ರವರಿ 14 ರಂದು ನಡೆದಿದ್ದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಶಿರಸಿಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದ್ದು, ನಾಲ್ವರು ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಅವಳಿ ಕೊಲೆಗೈದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ - Twin murder in kanagoda]
ಉತ್ತರ ಕನ್ನಡ ಜಿಲ್ಲೆಯ ಕಾನಗೋಡಿನಲ್ಲಿ ಅವಳಿ ಕೊಲೆಗೈದ ನಾಲ್ವರು ಆರೋಪಿಗಳಿಗೆ ಶಿರಸಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
![ಅವಳಿ ಕೊಲೆಗೈದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ](https://etvbharatimages.akamaized.net/etvbharat/prod-images/768-512-5138239-thumbnail-3x2-vicky.jpg)
Representative image
ಕಾನಗೋಡ ನಿವಾಸಿ ಗಣಪತಿ ನಾಯ್ಕ, ಪವನ ನಾಯ್ಕ, ಪ್ರಸಾದ ನಾಯ್ಕ ಹಾಗೂ ಪೃಥ್ವಿ ನಾಯ್ಕಗೆ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು. ಕಾನಗೋಡಿನ ರೇಣುಕಾ ನಾಯ್ಕ ಮತ್ತು ರವಿ ನಾಯ್ಕ ಅವರನ್ನು 2018ರಲ್ಲಿ ಈ ನಾಲ್ವರು ಕೊಲೆಗೈದಿದ್ದರು.