ಕರ್ನಾಟಕ

karnataka

ETV Bharat / jagte-raho

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್​ ರಾಯ್​ಗೆ 3 ವರ್ಷ ಜೈಲು - ನಿತ್ಯಾನಂದ್ ಗೌತಮ್

1999ರ ಜಾರ್ಖಂಡ್​ನ ಕಲ್ಲಿದ್ದಲು ಹಗರಣ ಸಂಬಂಧ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ರಾಜ್ಯ ಸಚಿವರಾಗಿದ್ದ ದಿಲೀಪ್​ ರಾಯ್ ಸೇರಿ ನಾಲ್ವರು ಅಪರಾಧಿಗಳಿಗೆ ಸಿಬಿಐ ಸ್ಪೆಷಲ್​​ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Three-year jail for ex Union Minister convicted in coal scam
ದಿಲೀಪ್​ ರಾಯ್

By

Published : Oct 26, 2020, 11:34 AM IST

ನವದೆಹಲಿ: 1999ರ ಜಾರ್ಖಂಡ್​ನ ಕಲ್ಲಿದ್ದಲು ಹಗರಣ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ)ದ ವಿಶೇಷ ನ್ಯಾಯಾಲಯ ಕೇಂದ್ರ ಮಾಜಿ ಸಚಿವ ದಿಲೀಪ್​ ರಾಯ್​ ಹಾಗೂ ಇತರ ಮೂವರು ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಜಾರ್ಖಂಡ್​ನ ಕಲ್ಲಿದ್ದಲು ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ರಾಜ್ಯ ಸಚಿವರಾಗಿದ್ದ ದಿಲೀಪ್​ ರಾಯ್ ಅವರ ಪಿತೂರಿ ಇರುವುದು ಸಾಬೀತಾಗಿತ್ತು.

ಅಕ್ಟೋಬರ್​ 6 ರಂದು ದಿಲೀಪ್​ ರಾಯ್​ ಜೊತೆ ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ (ಸಿಟಿಎಲ್)ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್​ರನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭಾರತ್ ಪರಾಶರ್ ತೀರ್ಪು ನೀಡಿತ್ತು.

ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣದ ಕುರಿತು ಇಂದು ವಿಚಾರಣೆ ನಡೆಸಿರುವ ಸಿಬಿಐ ಸ್ಪೆಷಲ್​​ ಕೋರ್ಟ್​, ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ABOUT THE AUTHOR

...view details