ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ವಸತಿಗೃಹದ ಆವರಣದಲ್ಲಿದ್ದ ಮರವೊಂದರಲ್ಲಿ ಯುವಕ ಹಾಗೂ ಯುವತಿಯ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆ - ಕಾನ್ಪುರ ಕ್ರೈಂ ಸುದ್ದಿ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸಾವಿಗೆ ನಿಖರ ಕಾರಣ ಹುಡುಕುತ್ತಿದ್ದಾರೆ.
![ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆ Couple's bodies found hanging from tree in Uttar Pradesh](https://etvbharatimages.akamaized.net/etvbharat/prod-images/768-512-9131522-thumbnail-3x2-megha.jpg)
ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆ
ಆತ್ಮಹತ್ಯೆ ಪ್ರಕರಣ ಕುರಿತು ಕಾನ್ಪುರ ಡಿಎಸ್ಪಿ ಬ್ರಜ್ ನಾರಾಯಣ್ ಸಿಂಗ್ ಮಾಹಿತಿ
ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದು, ಇವರ ಪ್ರೇಮಕ್ಕೆ ಪೋಷಕರ ವಿರೋಧವಿತ್ತು ಎಂಬ ಮಾಹಿತಿ ದೊರೆತಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ನೋಡ್ ಸಿಕ್ಕಿಲ್ಲ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಸಾವಿಗೆ ನಿಖರ ಕಾರಣ ಹುಡುಕಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕಾನ್ಪುರ ಡಿಎಸ್ಪಿ ಬ್ರಜ್ ನಾರಾಯಣ್ ಸಿಂಗ್ ತಿಳಿಸಿದ್ದಾರೆ.
10 ದಿನಗಳ ಹಿಂದೆ ಬೇರೆ ಹುಡುಗಿ ಜೊತೆ ಯುವಕನಿಗೆ ಮದುವೆ ನಿಶ್ಚಯವಾಗಿತ್ತು. ಇದರಿಂದ ನೊಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.