ಕರ್ನಾಟಕ

karnataka

ETV Bharat / jagte-raho

ಲಾರಿಗಳ ಮುಖಾಮುಖಿ ಡಿಕ್ಕಿ: ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಆಹುತಿ - undefined

ಇಂಡಿ ತಾಲೂಕಿನ ಅಂಗನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಈ ದುರ್ಘಟನೆ ಸಂಭಸಿದೆ.

ಲಾರಿಗಳ ಮುಖಾಮುಖಿ ಡಿಕ್ಕಿಯ ಬೆಂಕಿಯ ಕೆನ್ನಾಲಿಗೆ

By

Published : May 3, 2019, 11:50 PM IST

ವಿಜಯಪುರ: ಎರಡು ಕಂಟೇನರ್ ಲಾರಿಗಳ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿ ಇಬ್ಬರು ಸಜೀವ ದಹನವಾಗಿರುವ ಘಟನೆಇಂಡಿ ತಾಲೂಕಿನ ಅಂಗನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ನಡೆದಿದೆ.

ದುರಂತದಲ್ಲಿ ಪ್ರಾಣ ಕಳೆದುಕೊಂಡ ಇಬ್ಬರು ವ್ಯಕ್ತಿಗಳ ಬಗ್ಗೆ ಸದ್ಯ ಮಾಹಿತಿ ದೊರೆತಿಲ್ಲ.

ಲಾರಿಗಳ ಮುಖಾಮುಖಿ ಡಿಕ್ಕಿಯ ಬೆಂಕಿಯ ಕೆನ್ನಾಲಿಗೆ

ಕಂಟೇನರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯ ಸಂಭವಿಸಿದ ಕಾರಣ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅಗ್ನಿಯ ಕೆನ್ನಾಲಿಗೆ ಲಾರಿಗಳನ್ನು ವ್ಯಾಪಿಸಿದೆ. ಈ ಸಂದರ್ಭ ಇಬ್ಬರು ಸಜೀವ ದಹನವಾಗಿದ್ದು, ಓರ್ವ ಕ್ಲೀನರ್​ ಸುದೈವವಶಾತ್‌ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದ ಕಾರಣ ಕೆಲಕಾಲ ಈ ಮಾರ್ಗದಲ್ಲಿ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

For All Latest Updates

TAGGED:

ABOUT THE AUTHOR

...view details