ಚಿತ್ರಕೂಟ (ಉತ್ತರ ಪ್ರದೇಶ): ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಅವರ ಸೋದರಳಿಯನನ್ನು ನೆರೆ ಮನೆಯ ವ್ಯಕ್ತಿಯೇ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದಿದೆ.
ಪ್ರಸಿದ್ಧಪುರ್ ಗ್ರಾಮದ ನಿವಾಸಿಯಾಗಿರುವ ಜಿಲ್ಲಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅಶೋಕ್ ಪಟೇಲ್ (55) ಮೃತ ಕೈ ನಾಯಕ.
ಅಶೋಕ್ ಪಟೇಲ್ ಅವರಿಗೆ ಆರೋಪಿ ಕಮಲೇಶ್ ಕುಮಾರ್ ಜೊತೆ ವೈಷಮ್ಯವಿತ್ತು. ಇದೇ ಕಾರಣದಿಂದ ಮಂಗಳವಾರ ರಾತ್ರಿ ಅಶೋಕ್ರ ಮನೆಗೆ ನುಗ್ಗಿದ ಕಮಲೇಶ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಕೃತ್ಯವನ್ನು ತಡೆಯಲು ಬಂದ ಪಟೇಲ್ರ ಸೋದರಳಿಯ ಶುಭಂ (28)ಗೂ ಗುಂಡಿಕ್ಕಿ ಆರೋಪಿ ಹತ್ಯೆಗೈದಿದ್ದಾನೆ ಎಂಬ ಮಾಹಿತಿ ದೊರೆತಿದೆ.