ಕರ್ನಾಟಕ

karnataka

ETV Bharat / jagte-raho

ಬೋರ್​ - ಗೂಡ್ಸ್ ಲಾರಿ ನಡುವೆ ಡಿಕ್ಕಿ: ಎರಡೂ ಕಾಲು ಕಳೆದುಕೊಂಡ ಚಾಲಕ​ - ಬೋರ್ ವೆಲ್ ಲಾರಿ ಹಾಗೂ ಗೂಡ್ಸ್ ಲಾರಿ ಡಿಕ್ಕಿ ನ್ಯೂಸ್​

ಶಿವಮೊಗ್ಗದ ಬಳ್ಳಿಗಾವಿ ಕ್ರಾಸ್ ಬಳಿ ಬೋರ್ ಲಾರಿ ಮತ್ತು ಗೂಡ್ಸ್ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಗೂಡ್ಸ್ ಲಾರಿ ಚಾಲಕನ 2 ಕಾಲು ಕಟ್​ ಆಗಿದೆ.

ಶಿವಮೊಗ್ಗದ ಬಳ್ಳಿಗಾವಿ ಕ್ರಾಸ್ ಬಳಿ ಅಪಘಾತ
ಶಿವಮೊಗ್ಗದ ಬಳ್ಳಿಗಾವಿ ಕ್ರಾಸ್ ಬಳಿ ಅಪಘಾತ

By

Published : Apr 27, 2020, 11:34 AM IST

ಶಿವಮೊಗ್ಗ: ಬೋರ್ ವೆಲ್ ಲಾರಿ ಹಾಗೂ ಗೂಡ್ಸ್ ಲಾರಿ ನಡುವೆ ಬೆಳಗ್ಗೆ ಡಿಕ್ಕಿ ಸಂಭವಿಸಿದ ಪರಿಣಾಮ ಗೂಡ್ಸ್ ಲಾರಿ ಚಾಲಕನ ಕಾಲು ತುಂಡಾಗಿರುವ ಘಟನೆ ಜಿಲ್ಲೆಯ ಬಳ್ಳಿಗಾವಿ ಕ್ರಾಸ್ ಬಳಿ ನಡೆದಿದೆ.

ಶಿವಮೊಗ್ಗದ ಬಳ್ಳಿಗಾವಿ ಕ್ರಾಸ್ ಬಳಿ ಅಪಘಾತ

ಶಿಕಾರಿಪುರ ತಾಲೂಕು ಬಳ್ಳಿಗಾವಿ ಗ್ರಾಮದ ಕ್ರಾಸ್ ಬಳಿಯ ಶಿವಮೊಗ್ಗ ಹಾಗೂ ತಡಸ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಗೂಡ್ಸ್ ಲಾರಿ ಶಿಕಾರಿಪುರ ಕಡೆಯಿಂದ ಬರುತ್ತಿತ್ತು. ಬೋರ್ ಲಾರಿ ಶಿಕಾರಿಪುರದ ಕಡೆಗೆ ಹೊರಟಿತ್ತು. ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇನ್ನು ಅಪಘಾತದಲ್ಲಿ ಗೂಡ್ಸ್ ಲಾರಿ ಚಾಲಕ ಮಂಜುನಾಥ್ ಅವರ ಎರಡು ಕಾಲು ಕಟ್ ಆಗಿದ್ದು, ಇವರು ಬೆಳಗಾವಿ ಮೂಲದವರು ಎಂದು ತಿಳಿದು ಬಂದಿದೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಹಿಂದೆಯೂ ಸಹ ಇದೇ ಜಾಗದಲ್ಲಿ ಸಾಕಷ್ಟು ಬಾರಿ ಅಪಘಾತ ಸಂಭವಿಸಿದೆ. ಈ ಕುರಿತು ರಾಜ್ಯ ಹೆದ್ದಾರಿ ಪ್ರಾಧಿಕಾರದವರು ತಕ್ಷಣ ಗಮನ ಹರಿಸಬೇಕು ಎಂದು ಸ್ಥಳೀಯ ನಿವಾಸಿ ನವೀದ್ ಆಗ್ರಹಿಸಿದ್ದಾರೆ.

ABOUT THE AUTHOR

...view details