ಹುಬ್ಬಳ್ಳಿ: ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿದ್ದ ಬಿಆರ್‌ಟಿಎಸ್ ಬಸ್‌ಗೆ ಹಿಂದಿನಿಂದ ಬಂದ ಇನ್ನೊಂದು ಬಸ್ ಡಿಕ್ಕಿ ಹೊಡೆದಿರೋ ಘಟನೆನಗರದ ಉಣಕಲ್ ಸೇತುವೆ ಬಳಿ ನಡೆದಿದೆ.
ಒಂದ್ ತಪ್ಪಿಸಲು ಹೋಗಿ ಇನ್ನೊಂದಾಯ್ತು.. ಹುಬ್ಬಳ್ಳಿ ಸರಣಿ ಅಪಘಾತದಲ್ಲಿ ಪ್ರಯಾಣಿಕರಿಗೆ ಗಾಯ - undefined
ಅಡ್ಡ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದ್ದ ಬಿಆರ್‌ಟಿಎಸ್ ಬಸ್‌ಗೆ ಇನ್ನೊಂದು ಬಸ್ ಹಿಂದಿನಿಂದ ಗುದ್ದಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಿಆರ್‌ಟಿಎಸ್ ಬಸ್
ಬಿಆರ್‌ಟಿಎಸ್ ಬಸ್‌ಗೆ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದ. ಬೈಕ್‌ಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಹೋಗಿದ್ದ ಬಸ್‌ನ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಇನ್ನೊಂದು ಬಿಆರ್‌ಟಿಎಸ್ ಬಸ್, ಮುಂದಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಒಂದು ಬಸ್ ಮುಂಭಾಗ, ಇನ್ನೊಂದು ಬಸ್‌ನ ಹಿಂಭಾಗ ನಜ್ಜುಗುಜ್ಜಾಗಿದ್ದು, ಅವೆರಡನ್ನೂ ಮಾರ್ಗ ಮಧ್ಯೆ ನಿಲ್ಲಿಸಲಾಗಿತ್ತು. ಈ ಘಟನೆಯಿಂದಾಗಿ ಕೆಲಹೊತ್ತು ಸಂಚಾರಕ್ಕೆ ಅಡ್ಡಿಯಾದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.