ಚಿತ್ರದುರ್ಗ:ಯುವಕನೊಬ್ಬ ಯುವತಿಗೆ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡಿದಕ್ಕಾಗಿ ಯುವತಿ ಹಾಗೂ ಪೋಷಕರು ಸಖತ್ ಗೂಸಾ ಕೊಟ್ಟಿರುವ ಘಟನೆ ಚಿತ್ರದುರ್ಗ ನಗರದ ಬಡಾವಣೆ ಠಾಣೆ ಬಳಿ ನಡೆದಿದೆ.
ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ಮೋಸ... ಯುವಕನಿಗೆ ಬಿತ್ತು ಸಖತ್ ಗೂಸಾ...! - ಮದುವೆ ಆಗುವುದಾಗಿ ನಂಬಿಸಿ 15 ಲಕ್ಷ ರೂ. ಪಡೆದು ವಂಚನೆ
ಯುವಕನೊಬ್ಬ ಯುವತಿಗೆ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡಿದಕ್ಕಾಗಿ ಯುವತಿ ಹಾಗೂ ಪೋಷಕರು ಸಖತ್ ಗೂಸಾ ಕೊಟ್ಟಿರುವ ಘಟನೆ ಚಿತ್ರದುರ್ಗ ನಗರದ ಬಡಾವಣೆ ಠಾಣೆ ಬಳಿ ನಡೆದಿದೆ.
ಮದುವೆ ಆಗುದಾಗಿ ನಂಬಿಸಿ ಯುವತಿಗೆ ಮೋಸ...ಯುವಕನಿಗೆ ಬಿತ್ತು ಸಖ್ಖತ್ ಗೂಸ...!
ಆರೋಪಿ ಉಮೇಶ್ ಎಂಬಾತನಿಂದ ಮೋಸ ಹೋದ ಯುವತಿ ಚಪ್ಪಲಿಯಿಂದ ಹೊಡೆಯುವ ಮೂಲಕ ಆಕ್ರೋಶ ಹೊರಹಾಕಿದ್ದಾಳೆ. ಯುವಕ ತೆರಳುತ್ತಿದ್ದ ಕಾರಿಗೆ ಅಡ್ಡಗಟ್ಟಿ ಮೋಸ ಹೋದ ಯುವತಿ ರೋಧಿಸಿದರೂ ಕ್ಯಾರೆ ಎನ್ನದ ಆರೋಪಿ ಉಮೇಶ್ ಗೆ ಧರ್ಮದೇಟು ನೀಡಲಾಗಿದೆ. ಮದುವೆ ಆಗುವುದಾಗಿ ನಂಬಿಸಿ 15 ಲಕ್ಷ ರೂ. ಪಡೆದು ವಂಚನೆ ಆರೋಪ ಉಮೇಶ್ ವಿರುದ್ಧ ಕೇಳಿ ಬಂದಿದ್ದು, ನ್ಯಾಯ ಕೊಡಿಸುವಂತೆ ಮೋಸ ಹೋದ ಯುವತಿ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಇನ್ನು ಪ್ರಕರಣದ ವಿಚಾರಣೆಗಾಗಿ ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
Last Updated : Jan 18, 2020, 11:49 AM IST