ಬೆಳಗಾವಿ :ಹುಕ್ಕೇರಿ ತಾಲೂಕಿನ ಶಹಾಬಂದರ್ ಬಳಿ ಅಕ್ರಮವಾಗಿ ಕಳ್ಳ ಭಟ್ಟಿ ಸಾಗಿಸುತ್ತಿದ್ದವರ ಮೇಲೆ ಚಿಕ್ಕೋಡಿ ಅಬಕಾರಿ ಪೊಲೀಸರು ದಾಳಿ ನಡೆಸಿ, 330 ಲೀ.ಕಳ್ಳ ಭಟ್ಟಿ ಸಾರಾಯಿ ವಶಡಿಸಿಕೊಂಡಿದ್ದಾರೆ.
ಚಿಕ್ಕೋಡಿ ಅಬಕಾರಿ ಪೊಲೀಸರ ದಾಳಿ.. ₹1.6 ಲಕ್ಷ ಮೌಲ್ಯದ ಕಳ್ಳಭಟ್ಟಿ ಸಾರಾಯಿ ವಶ.. - ಕಳ್ಳಭಟ್ಟಿ ಸಾರಾಯಿ ವಶ
ಕಳ್ಳ ಭಟ್ಟಿ ಸಾಗಣೆಗಾಗಿ ಬಳಕೆ ಮಾಡುತ್ತಿದ್ದ ಎರಡು ದ್ವಿಚಕ್ರ ವಾಹನಗಳು ಹಾಗೂ 11 ಟೂಬ್‍ಗಳಲ್ಲಿ ತಲಾ 30 ಲೀ.ನಂತೆ ಸಾಗಣೆ ಮಾಡುತ್ತಿದ್ದ 330 ಲೀ. ಕಳ್ಳ ಭಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ ಅಬಕಾರಿ ಪೊಲೀಸರ ದಾಳಿ, 1.6 ಲಕ್ಷ ರೂ. ಮೌಲ್ಯದ ಕಳ್ಳಭಟ್ಟಿ ಸಾರಾಯಿ ವಶ..!
ದಾಳಿಯಲ್ಲಿ ಸಿಕ್ಕ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಕಳ್ಳ ಭಟ್ಟಿ ಸಾಗಣೆಗಾಗಿ ಬಳಕೆ ಮಾಡುತ್ತಿದ್ದ ಎರಡು ದ್ವಿಚಕ್ರ ವಾಹನಗಳು ಹಾಗೂ 11 ಟೂಬ್‍ಗಳಲ್ಲಿ ತಲಾ 30 ಲೀ.ನಂತೆ ಸಾಗಣೆ ಮಾಡುತ್ತಿದ್ದ 330 ಲೀ. ಕಳ್ಳ ಭಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಅಂದಾಜು 1.6 ಲಕ್ಷ ರೂಗಳ ಮೌಲ್ಯದ ಕಳ್ಳಭಟ್ಟಿ ಎಂದು ಅಂದಾಜಿಸಲಾಗಿದೆ.
ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ ಹಿರೇಮಠ, ಅಬಕಾರಿ ಇನ್ಸ್ಪೆಕ್ಟರ್ ಬಸವರಾಜ ಕರಮಣ್ಣವರ, ಸಿಬ್ಬಂದಿಗಳಾದ ಸುನೀಲ್‌ಕುಮಾರ್, ಹಸನಸಾಬ್, ವಿಜಯ ಉಪ್ಪಾರ ದಾಳಿಯಲ್ಲಿ ಭಾಗವಹಿಸಿದ್ದರು.