ಕರ್ನಾಟಕ

karnataka

ETV Bharat / jagte-raho

ದಂತೇವಾಡದಲ್ಲಿ ಇಬ್ಬರು ಮಹಿಳಾ ನಕ್ಸಲರ ಹತ್ಯೆ - ದಂತೇವಾಡ ಎನ್​ಕೌಂಟರ್

ಮೃತ ನಕ್ಸಲರನ್ನು ಮಲಂಗೀರ್ ಪ್ರದೇಶದ ಮಿಲಿಟರಿ ಗುಪ್ತಚರ ಮುಖ್ಯಸ್ಥೆ ಆಯೆಟೆ ಮಾಂಡವಿ ಮತ್ತು ಅದರ ಸದಸ್ಯೆ ವಿಜ್ಜೆ ಮಾರ್ಕಮ್ ಎಂದು ಗುರುತಿಸಲಾಗಿದೆ..

women Naxals killed in Dantewada dist
ಮಹಿಳಾ ನಕ್ಸಲರ ಹತ್ಯೆ

By

Published : Dec 29, 2020, 7:24 AM IST

ದಂತೇವಾಡ (ಛತ್ತೀಸ್​​ಗಢ): ದಂತೇವಾಡದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಛತ್ತೀಸ್​​ಗಢ ಪೊಲೀಸರು ಹೊಡೆದುರುಳಿಸಿದ್ದಾರೆ.

ಕುಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಾಲೆಪಾಲ್ ಮತ್ತು ಕಾಕರಿ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಪೊಲೀಸ್​ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಈ ವೇಳೆ ಇಬ್ಬರು ಮಹಿಳಾ ನಕ್ಸಲರ ಹತ್ಯೆಗೈದು, ಅವರ ಬಳಿ ಇದ್ದ ಮದ್ದು ಗುಂಡುಗಳು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇನ್​ಸ್ಪೆಕ್ಟರ್​ ಜನರಲ್​​ ಪಿ ಸುಂದರರಾಜ್​​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಪಸಭಾಪತಿ ಎಸ್​ ಎಲ್​ ಧರ್ಮೇಗೌಡ ಆತ್ಮಹತ್ಯೆ, ಕಾರಣ ನಿಗೂಢ

ಮೃತ ನಕ್ಸಲರನ್ನು ಮಲಂಗೀರ್ ಪ್ರದೇಶದ ಮಿಲಿಟರಿ ಗುಪ್ತಚರ ಮುಖ್ಯಸ್ಥೆ ಆಯೆಟೆ ಮಾಂಡವಿ ಮತ್ತು ಅದರ ಸದಸ್ಯೆ ವಿಜ್ಜೆ ಮಾರ್ಕಮ್ ಎಂದು ಗುರುತಿಸಲಾಗಿದೆ.

ABOUT THE AUTHOR

...view details