ಕರ್ನಾಟಕ

karnataka

ETV Bharat / jagte-raho

ಸ್ಟಾರ್​ ಹೋಟೆಲ್​​ನ ರೂಮ್​ನಲ್ಲಿಟ್ಟಿದ್ದ ಚಿನ್ನದ ಸರ ಮಂಗಮಾಯ! - ಶೇಷಾದ್ರಿಪುರಂ ಪೊಲೀಸ್​​​​ ಠಾಣಾ ವ್ಯಾಪ್ತಿ

ಸ್ಟಾರ್​​​​​ ಹೋಟೆಲ್​ನ ರೂಮ್​ನಲ್ಲಿಟ್ಟಿದ್ದ 50 ಗ್ರಾಂ. ಚಿನ್ನದ ಸರ ಕಳ್ಳತವಾಗಿರುವ ಘಟನೆ ಶೇಷಾದ್ರಿಪುರಂ ಪೊಲೀಸ್​​​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

chain snatching in star hotel at bangalore
ಚಿನ್ನದ ಸರ ಕಳುವು

By

Published : Jan 2, 2020, 3:05 PM IST

ಬೆಂಗಳೂರು: ದಂಪತಿ ತಾವು ತಂಗಿದ್ದ ಹೋಟೆಲ್​​ನ ರೂಮ್​ನಲ್ಲಿಯೇ 50 ಗ್ರಾಂ ಚಿನ್ನದ ಸರ ಬಿಚ್ಚಿಟ್ಟು ಭೋಜನಕ್ಕೆ ವೇಳೆ ಕಳ್ಳರು ಸರವನ್ನು ಮಂಗಮಾಯ ಮಾಡಿದ್ದಾರೆ.

ಕುಶಾಗ್ರ ಶರ್ಮಾ ಹಾಗೂ ಅವರ ಪತ್ನಿ ಕುಮಾರಕೃಪ ಬಳಿಯಿರುವ ಸ್ಟಾರ್ ಹೋಟೆಲ್​​ನಲ್ಲಿ ತಂಗಿದ್ದರು. 3 ಲಕ್ಷ ರೂಪಾಯಿ ಬೆಲೆಬಾಳುವ ಸರವನ್ನು ಪತ್ನಿ, ಬೆಡ್​ ಸಮೀಪವಿಟ್ಟು ಭೋಜನಕ್ಕೆ ಹೋಗಿದ್ದರು ಎನ್ನಲಾಗ್ತಿದೆ.

ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ನಿ ಕತ್ತಲ್ಲಿ ಚಿನ್ನದ ಸರ ಇಲ್ಲದಿರುವುದನ್ನ ಕಂಡು ಪತಿ ಕೇಳಿದಾಗ, ಈ ವಿಷಯ ತಿಳಿಸಿದ್ದಾಳೆ. ಊಟ ಮುಗಿದ ಬಳಿಕ ರೂಮ್​ಗೆ ಬಂದು ನೋಡಿದಾಗ ಸರ ಇರಲಿಲ್ಲ. ತಕ್ಷಣ ಈ ಬಗ್ಗೆ ಹೋಟೆಲ್ ಮ್ಯಾನೇಜ್​ಮೆಂಟ್​​ಗೆ ತಿಳಿಸಿದರು.

ಅಲ್ಲಿನ ಕೆಲಸದವರೇ ಕಳ್ಳತನ ಮಾಡಿರಬಹುದೆಂಬ ಅನುಮಾನದ ಹಿನ್ನೆಲೆ ದಂಪತಿ ಶೇಷಾದ್ರಿಪುರಂ ಪೊಲೀಸ್​​​​ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details