ಕರ್ನಾಟಕ

karnataka

ETV Bharat / jagte-raho

ಮತ್ತೆ ಸದ್ದು ಮಾಡಿದ ಪಲ್ಸರ್ ಬೈಕ್ ಸರಗಳ್ಳರು: ಮಹಿಳೆಗೆ ಚಾಕು ತೋರಿಸಿ ಮಾಂಗಲ್ಯ ಎಗರಿಸಿದ್ರು - ಇಡಗೂರು ಗ್ರಾಮದಲ್ಲಿ ಕಳ್ಳತನ

ಪಲ್ಸರ್​ ಬೈಕ್​ ಸರಗಳ್ಳರು ಮತ್ತೆ ಬಾಲ ಬಿಚ್ಚಿದ್ದಾರೆ. ಮಹಿಳೆವೋರ್ವಳಿಗೆ ಚಾಕು ತೋರಿಸಿದ ಸುಮಾರು 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮತ್ತೆ ಸದ್ದು ಮಾಡುತ್ತಿರುವ ಪಲ್ಸರ್ ಬೈಕ್ ಸರಗಳ್ಳರು...

By

Published : Nov 11, 2019, 10:26 AM IST

ಗೌರಿಬಿದನೂರು:ಮಹಿಳೆವೋರ್ವಳಿಗೆ ಚಾಕು ತೋರಿಸಿದ ಸರಗಳ್ಳರು ಸುಮಾರು 40 ಗ್ರಾಂ ಚಿನ್ನದ ಮಾಂಗಲ್ಯದ ಸರವನ್ನು ದರೋಡೆ ಮಾಡಿರುವ ಘಟನೆ ತಾಲೂಕಿನ ಇಡಗೂರು ಗ್ರಾಮದಲ್ಲಿ ನಡೆದಿದೆ.

ಮಹಿಳೆ ತಮ್ಮ ಮನೆಯಿಂದ ಜಮೀನಿನ ಕಡೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಲ್ಸರ್ ಬೈಕ್​ನಲ್ಲಿ ಬಂದ ಇಬ್ಬರು ಖದೀಮರು ದಾರಿ ಕೇಳುವ ನೆಪದಲ್ಲಿ ಮಹಿಳೆ ಜೊತೆ ಮಾತನಾಡಿದ್ದರು. ಸುತ್ತಮುತ್ತ ಯಾರು ಇಲ್ಲದೆ ಇರುವುದನ್ನು ಗಮನಿಸಿ, ಆಕೆಗೆ ಚಾಕು ತೋರಿಸಿ ಮಾಂಗಲ್ಯ ಸರವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ‌ ಕೈಗೊಂಡಿದ್ದಾರೆ.


ABOUT THE AUTHOR

...view details