ಬೆಂಗಳೂರು:ಕೊರೊನಾ ಮಧ್ಯೆ ಐಪಿಎಲ್ ಕ್ರಿಕೆಟ್ ಹವಾ ಶುರುವಾಗಿದ್ದು, ಜೊತೆಗೆ ಬೆಟ್ಟಿಂಗ್ ದಂಧೆ ಕೂಡ ಜೋರಾಗಿದೆ. ಹೀಗಾಗಿ ಈ ವಿಚಾರ ತಿಳಿದು ಸಿಸಿಬಿ ಪೊಲೀಸರ ತಂಡ ದಾಳಿ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ: ಆರು ಮಂದಿ ಆರೋಪಿಗಳು ಅಂದರ್ - IPL cricket betting arrest of six accused
ಐಪಿಎಲ್ ಪಂದ್ಯಾವಳಿಗಳ ಸೋಲು-ಗೆಲುವಿನ ಬಗ್ಗೆ ಮೊಬೈಲ್ ಮುಖಾಂತರ ಬೆಟ್ಟಿಂಗ್ ನಡೆಸುತ್ತಿದ್ದ ಕಾರಣ ಆರು ಮಂದಿ ಆರೋಪಿಗಳ ಬಂಧಿಸಿರುವ ಸಿಸಿಬಿ ಬೆಟ್ಟಿಂಗ್ ನಲ್ಲಿ ತೊಡಗಿಸಿದ್ದ 6 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮೇಲೆ ಸಿಸಿಬಿ ದಾಳಿ, ಆರು ಮಂದಿ ಆರೋಪಿಗಳ ಬಂಧನ
ಮೊನ್ನೆ ಆರ್ಸಿಬಿ ಮತ್ತು ಪಂಜಾಬ್, ನಿನ್ನೆ ಚೆನ್ನೈ ಮತ್ತು ರಾಜಾಸ್ಥಾನ ಪಂದ್ಯ ನಡೆದಿತ್ತು. ಐಪಿಎಲ್ ಪಂದ್ಯಾವಳಿಗಳ ಸೋಲು ಗೆಲುವಿನ ಬಗ್ಗೆ ಮೊಬೈಲ್ ಮುಖಾಂತರ ಬೆಟ್ಟಿಂಗ್ ನಡೆಸುತ್ತಿದ್ದ ಕಾರಣ ಆರು ಮಂದಿ ಆರೋಪಿಗಳ ಬಂಧಿಸಿ ಬೆಟ್ಟಿಂಗ್ ನಲ್ಲಿ ತೊಡಗಿಸಿದ್ದ 6 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದಿದ್ದಾರೆ.
ಹಾಗೆ ಬಾಣಸವಾಡಿ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ಸದ್ಯ ಹೆಚ್ವಿನ ಮಾಹಿತಿಗೆ ತನಿಖೆ ಶುರು ಮಾಡಿದ್ದಾರೆ.