ಬೆಂಗಳೂರು: ಹುಡುಗಿಯರ ಅಮಾಯಕತೆಯನ್ನೇ ಬಂಡವಾಳವಾಗಿಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಅಡ್ಡೆ ಮೇಲೆ ದಾಳಿ ಮಾಡಿ ಮೂವರು ಆರೋಪಿಗಳ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹತೆನಲ್ ಚೊಂಗ್ ಹೊಲಿಪ್, ಸಟ್ಜೇಸಿ ಹೊವುಮ್, ರಾಬರ್ಟ್ ಬಂಧಿತ ಆರೋಪಿಗಳು. ಜೀವನ್ ಭೀಮಾನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿರುವ ಈಸ್ಟರ್ನ್ ಸೆಲೂನ್ ಅಂಡ್ ಸ್ಪಾನಲ್ಲಿ ಸಿಕ್ಕಿಂ ಮತ್ತು ನಾಗಲ್ಯಾಂಡ್ ನಿಂದ ಹುಡುಗಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿ ಹಣದ ಸಹಾಯ ಮಾಡುವುದಾಗಿ ಆಸೆ ಹುಟ್ಟಿಸಿ ವೆಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.