ಕರ್ನಾಟಕ

karnataka

ETV Bharat / jagte-raho

ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ: ದಾಖಲೆಗಳ ಪರಿಶೀಲನೆಯಲ್ಲಿ ಅಧಿಕಾರಿಗಳು - ಡಿ.ಕೆ ಶಿವಕುಮಾರ್ ಆಸ್ತಿ

ಡಿ.ಕೆ.ಶಿವಕುಮಾರ್ ಆಸ್ತಿ ಕುರಿತು ಪಟ್ಟಿ ಮಾಡಿರುವ ಸಿಬಿಐ ಅಧಿಕಾರಿಗಳು, ಸದ್ಯಕ್ಕೆ ಆರ್.ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗಂಗೆನಹಳ್ಳಿ ಬಳಿಯ ಸಿಬಿಐ ಕಚೇರಿಯಲ್ಲಿ ದಾಳಿ ವೇಳೆ ಸಿಕ್ಕಂತಹ ಎಲ್ಲಾ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

Dk shivkumar home
Dk shivkumar home

By

Published : Oct 7, 2020, 9:33 AM IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಸಿಬಿಐ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಹಾಗೂ ಡಿಕೆಶಿ ಆಪ್ತರಿಗೆ ದಾಳಿ ಶಾಕ್ ನೀಡಿದ‌ ಬೆನ್ನಲ್ಲೇ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ಡಿಕೆಶಿ ಆಸ್ತಿ ಕುರಿತು ಪಟ್ಟಿ ಮಾಡಿರುವ ಸಿಬಿಐ, ಸದ್ಯಕ್ಕೆ ಆರ್.ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಳ್ಳಾರಿ-ಬೆಂಗಳೂರು ಮುಖ್ಯ ರಸ್ತೆಯ ಗಂಗೆನಹಳ್ಳಿಯ ಬಳಿಯ ಸಿಬಿಐ ಕಚೇರಿಯಲ್ಲಿ ದಾಳಿ ವೇಳೆ ಸಿಕ್ಕಂತಹ ಎಲ್ಲಾ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ದೆಹಲಿಯ ಕೆಲ ಸಿಬಿಐ ಅಧಿಕಾರಿಗಳು ಕೂಡ ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಡಿಕೆಶಿ ಮೇಲೆ ಎಫ್​ಐಆರ್ ದಾಖಲಿಸಿರುವ ಸಿಬಿಐ, ಅದರ ಆಧಾರದ ಮೇಲೆ ತನಿಖೆ ಶುರು ಮಾಡಿದ್ದು, ಡಿಕೆಶಿಯ ವಿಚಾರಣೆ ನಡೆಸಲು ಕೂಡ ಮುಂದಾಗಿದೆ. ಯಾಕಂದ್ರೆ ತನಿಖೆ ವೇಳೆ ಸಿಕ್ಕಿದ ಆಸ್ತಿಗೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಡಿಕೆಶಿ ಉತ್ತರ ಕೊಡುವುದು ಅನಿವಾರ್ಯವಾಗಿದೆ. ಹೀಗಾಗಿ ಆದಷ್ಟು ಬೇಗ ಡಿಕೆಶಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.

ಇನ್ನು ಡಿಕೆಶಿ ಸಹ ಸದ್ಯಕ್ಕೆ ಮುಂಜಾಗ್ರತಾ ಹೆಜ್ಜೆ ಇಡ್ತಿದ್ದಾರೆ. ತಾವು ಎಲ್ಲಿಯೂ ಕೂಡ ಸಿಬಿಐ ಖೆಡ್ಡಾಕ್ಕೆ ಬೀಳಬಾರದೆಂದು ಹಿರಿಯ ವಕೀಲರ ಜೊತೆ ಸಮಾಲೋಚನೆ ನಡೆಸಿ, ನಿರ್ಧಾರ ಕೈಗೊಳ್ತಿದ್ದಾರೆ ಎನ್ನಲಾಗಿದೆ. ಇತ್ತ ಸಿಬಿಐ ಕೂಡ ಪಕ್ಕಾ ದಾಖಲಾತಿಗಳನ್ನು ಹಿಡಿದುಕೊಂಡು ತನಿಖೆ ನಡೆಸಲು ಮುಂದಾಗಿದೆ.

ABOUT THE AUTHOR

...view details