ನವದೆಹಲಿ: ಸ್ವಘೋಷಿತ ದೇವಮಾನವ ದಾತಿ ಮಹಾರಾಜ್ ಮತ್ತು ಅವರ ಸಹೋದರರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಅತ್ಯಾಚಾರ ಪ್ರಕರಣ: ಆರೋಪಿ ದಾತಿ ಮಹಾರಾಜ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಸಿಬಿಐ - ಪೂರಕ ದೋಷಾರೋಪ ಪಟ್ಟಿ
2018ರ ಅತ್ಯಾಚಾರ ಪ್ರಕರಣದ ಆರೋಪಿಗಳಾಗಿರುವ ಸ್ವಘೋಷಿತ ದೇವಮಾನವ ದಾತಿ ಮಹಾರಾಜ್ ಮತ್ತು ಅವರ ಸಹೋದರರ ವಿರುದ್ಧ ಸಿಬಿಐ ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ದಾತಿ ಮಹಾರಾಜ್ ಮತ್ತು ಅವರ ಸಹೋದರರಾದ ಅಶೋಕ್, ಅರ್ಜುನ್ ಹಾಗೂ ಅನಿಲ್ ವಿರುದ್ಧ ಸಿಬಿಐ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದೀಗ ಈ ಪಟ್ಟಿಯಿಂದ ಅನಿಲ್ ಹೆಸರನ್ನು ಸಿಬಿಐ ತೆಗೆದು ಹಾಕಿದೆ. ಸೆ.24 ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಿನಿತಾ ಗೋಯಲ್ ಸಿಬಿಐ ಚಾರ್ಜ್ಶೀಟ್ನ ಪರಿಶೀಲನೆ ನಡೆಸಲಿದ್ದಾರೆ.
2018ರಲ್ಲಿ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ದಾತಿ ಮಹಾರಾಜ್ ಮತ್ತು ಅವರ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ದೆಹಲಿ ಪೊಲೀಸರ ತನಿಖೆಯಿಂದ ಅಸಮಾಧಾನಗೊಂಡಿದ್ದ ದೆಹಲಿ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಸಿಬಿಗೆ ವಹಿಸಿತ್ತು.