ಜಬಲ್ಪುರ್ (ಮಧ್ಯಪ್ರದೇಶ): ಲಂಚ ನೀಡುವಂತೆ ಒತ್ತಾಯಿಸಿದ ಆರೋಪದಡಿ ಸೇನಾ ಬ್ಯಾರಕ್ ಸ್ಟೋರ್ನ ಅಧಿಕಾರಿ ಹಾಗೂ ಸ್ಟೋರ್ ಕೀಪರ್ನನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.
ಲಂಚ ಕೇಳಿದ ಆರೋಪ: ಸೇನಾ ಬ್ಯಾರಕ್ನ ಅಧಿಕಾರಿಯನ್ನು ಬಂಧಿಸಿದ ಸಿಬಿಐ
ಗುತ್ತಿಗೆದಾರರಿಂದ 3,10,000 ರೂ. ಲಂಚಕ್ಕೆ ಬೇಡಿಕೆಯಿಟ್ಟ ಸೇನಾ ಬ್ಯಾರಕ್ ಸ್ಟೋರ್ನ ಅಧಿಕಾರಿ ಹಾಗೂ ಸ್ಟೋರ್ ಕೀಪರ್ನನ್ನು ಸಿಬಿಐ ಅರೆಸ್ಟ್ ಮಾಡಿದೆ.
ಸಿಬಿಐ
ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಮಿಲಿಟರಿ ಎಂಜಿನಿಯರ್ ಸೇವೆಗಳ 'ಗ್ಯಾರಿಸನ್ ಎಂಜಿನಿಯರ್' ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಪೀಠೋಪಕರಣಗಳ ದುರಸ್ತಿಗಾಗಿ ಬಂದ ಗುತ್ತಿಗೆದಾರರಿಂದ 3,10,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಗುತ್ತಿಗೆದಾರನು ಒಂದು ಲಕ್ಷ ಹಣ ಹೊಂದಿಸಿದ್ದು, ಉಳಿಕ ಹಣವನ್ನು ಚೆಕ್ ಮೂಲಕ ನೀಡುವಂತೆ ಆರೋಪಿಗಳು ಹೇಳಿದ್ದಾರೆಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಗಳಿಂದ 1 ಲಕ್ಷ ಹಣ ವಶಕ್ಕೆ ಪಡೆದಿದ್ದು, ಅವರನ್ನು ಜಬಲ್ಪುರದ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.